ರಾಣೇಬೆನ್ನೂರು: ಶ್ರದ್ಧಾ – ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ

ರಾಣೇಬೆನ್ನೂರು: ಶ್ರದ್ಧಾ – ಭಕ್ತಿಯಿಂದ  ವೈಕುಂಠ ಏಕಾದಶಿ ಆಚರಣೆ

ರಾಣೇಬೆನ್ನೂರು, ಜ.13- ಇಲ್ಲಿನ ವಾಗೀಶ ನಗರದಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರುವಾರ ವೈಕುಂಠ ಏಕಾದಶಿಯನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. 

ಈ ದಿವಸ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ದೇವಸ್ಥಾನ ಬಳಿ ಸ್ವರ್ಗದ ಮಾದರಿಯ ಮಂಟಪ ನಿರ್ಮಿಸಲಾಗಿತ್ತು.  ಭಕ್ತರು ಮಂಟಪದ ಮೂಲಕ ಸಾಗಿಬಂದು ಅದರ ಎದುರಿನ ಕಟ್ಟೆಯ ಮೇಲೆ ದೇವರ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ದರ್ಶನದ ನಂತರ ಆಗಮಿಸಿದ   ಭಕ್ತರಿಗೆ ತಿರುಪತಿ ಮಾದರಿ ಲಡ್ಡುವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.  

ಗೋವಿಂದ ಚಿಮ್ಮಲಗಿ ನೇತೃತ್ವದ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿದರು. 

ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ ರಾಯಚೂರ, ಅರಣ್ಯ, ಕೈಗಾರಿಕೆ ನಿಗಮದ ಸದಸ್ಯೆ ಭಾರತಿ ಜಂಬಗಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಪಾಟೀಲ, ತಹಶೀಲ್ದಾರ್‌ ಜಿ.ಎಸ್. ಶಂಕರ್, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ವೆಂಕಟೇಶ ಬಣಕಾರ, ನಾಗರಾಜ ಗೌಡ್ರು, ವೆಂಕಟೇಶ ಬಸ್ತಿಪಾಡ, ಅಶೋಕ ಅರೆಪಲ್ಲಿ, ಹನುಮಂತಪ್ಪ ಅರೆಪಲ್ಲಿ, ಚಂದ್ರು ರಾಯಚೂರ, ಗುರುರಾಜ ಕೆ., ಶ್ರೀನಿವಾಸ ರಾಯಚೂರ, ಗುರುರಾಜ ರಾಯಚೂರ, ಎ.ಸುಬ್ರಮಣ್ಯ, ಪುಟ್ಟಪ್ಪ ಕಿರಿಗೇರಿ, ರವಿ ಕಿರಿಗೇರಿ, ಶ್ರೀಕಾಂತ ರಾಯಚೂರ, ಮಲ್ಲೇಶಪ್ಪ ಮಾದರ, ಕೆ.ಡಿ.ಸಾವಕಾರ ಸೇರಿದಂತೆ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.

Leave a Reply

Your email address will not be published.