ಇನ್ನರ್‌ವ್ಹೀಲ್ ದಿನಾಚರಣೆ

ಇನ್ನರ್‌ವ್ಹೀಲ್ ದಿನಾಚರಣೆ

ದಾವಣಗೆರೆ, ಜ. 13- ನಗರದ ವಿದ್ಯಾನಗರ ಕ್ಲಬ್‌ನಲ್ಲಿ ಇನ್ನರ್ ವ್ಹೀಲ್ ದಿನವನ್ನು ಆಚರಿಸಲಾಯಿತು. ಅಧ್ಯಕ್ಷರಾದ ಗಿರಿಜಾ ಬಿಲ್ಲಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಿಡ್‌ಟೌನ್ ಮಾಜಿ ಅಧ್ಯಕ್ಷೆ ಮಂಜುಳಾ ವೀರಣ್ಣ, ಇನ್ನರ್‌ವ್ಹೀಲ್ ಸಂಸ್ಥಾಪಕ ಅಧ್ಯಕ್ಷರಾದ ಸುಲೋಚನಾ ಮಾಗನೂರು ರಾಜಶೇಖರ್, ಪಾಲಿಕೆ ಸದಸ್ಯರುಗಳಾದ ಗೀತಾ ದಿಳ್ಯಪ್ಪ, ವೀಣಾ ನಂಜಪ್ಪ, ಗೌರಮ್ಮ ಗಿರೀಶ್ ಉಪಸ್ಥಿತರಿದ್ದರು.

ನಿರ್ಮಲಾ ಮಹೇಶ್ವರಪ್ಪ, ಸುಲೋಚನ ಮಾಗನೂರು, ಮಂಜುಳಾ ವೀರಣ್ಣ, ಹಿರಿಯ ಸದಸ್ಯರುಗಳಾದ ಸಾವಿತ್ರಮ್ಮ ಸಿದ್ದಪ್ಪ, ನಾಗೇಂದ್ರಮ್ಮ ಪರಮೇಶ್ವರಪ್ಪ, ಜಯಶೀಲ ಹೆಚ್ಚೆನ್ನೆಸ್, ರತ್ನಮ್ಮ ರಂಗನಾಥ್, ನಾಗರತ್ನ ಶಿವಶಂಕರ್, ಸುವರ್ಣ  ಶಿವಮೂರ್ತಿ, ಸಾವಿತ್ರ ನೆಸ್ವಿ, ಪ್ರೇಮ ಮಹೇಶ್ವರಪ್ಪ, ವಿಜಯ ಕಡೇಕೊಪ್ಪ, ರೇಣುಕಾ ಗುರುರಾಜ್, ಭಾಗ್ಯ ವೀರಣ್ಣ ಉಪಸ್ಥಿತರಿದ್ದರು.

ಸುಜಾತ ಆಚಾರ್ ಸ್ವಾಗತಿಸಿದರು. ನಿರ್ಮಲಾ ನಾಗರಾಜಚಾರ್ ನಿರೂಪಿಸಿದರು. ಕಾರ್ಯದರ್ಶಿ ರತ್ನ ಪಾಟೀಲ್ ವಂದಿಸಿದರು. ಈ ಸಂದ ರ್ಭದಲ್ಲಿ 60 ವರ್ಷ ತುಂಬಿದ ಸದಸ್ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.