Day: January 8, 2022

Home 2022 January 08 (Saturday)
ನಾಟಿ ಶುರು ಮಾಡಿದ ರೈತರು…
Post

ನಾಟಿ ಶುರು ಮಾಡಿದ ರೈತರು…

ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಭದ್ರಾ ಜಲಾಶಯದಿಂದ ನಾಲೆಗಳಿಗೆ ಬಿಟ್ಟಿರುವ ನೀರಿನಲ್ಲಿ ಅಚ್ಚುಕಟ್ಟಿನ ರೈತರು ಭತ್ತದ ಸಸಿ ಮಡಿ ಸಿದ್ದಪಡಿಸುತ್ತಿದ್ದರೆ ಇತ್ತ ದೇವರಬೆಳಕೆರೆ ಪಿಕಪ್ ಜಲಾಶಯ ಮತ್ತು ತುಂಗಭದ್ರಾ ನದಿ ಪಾತ್ರದ ರೈತರು ಈಗಾಗಲೇ ಬೆಳೆಸಿರುವ ಭತ್ತದ ಸಸಿಯಿಂದ ನಾಟಿ ಮಾಡುತ್ತಿರುವ ದೃಶ್ಯ ಗುರುವಾರ ಉಕ್ಕಡಗಾತ್ರಿ ಸಮೀಪ ಕಂಡು ಬಂತು.

12 ಅಡಿಯ ಅಂಬೇಡ್ಕರ್ ಪುತ್ಥಳಿ
Post

12 ಅಡಿಯ ಅಂಬೇಡ್ಕರ್ ಪುತ್ಥಳಿ

ನಗರದ ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಪುತ್ಥಳಿ ನಿರ್ಮಿಸಿದ ಮೇಲೆ ಅದಕ್ಕೆ ಯಾವುದೇ ರೀತಿಯ ಅವಮಾನ ಆಗದಂತೆ ಜವಾಬ್ದಾರಿ ವಹಿಸುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸ ಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಕಾಮಗಾರಿಗಳ ವಿಳಂಬದಿಂದ ಜನಪ್ರತಿನಿಧಿಗಳ ಗೌರವಕ್ಕೆ ಹಾನಿ
Post

ಕಾಮಗಾರಿಗಳ ವಿಳಂಬದಿಂದ ಜನಪ್ರತಿನಿಧಿಗಳ ಗೌರವಕ್ಕೆ ಹಾನಿ

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಕೈಗೊಳ್ಳುವ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಜನಪ್ರತಿನಿಧಿಗಳ ಗೌರವ ಉಳಿಸುವ ಬದಲು ಗೌರವ ಕಳೆಯುವ ಪ್ರಶ್ನೆ ಉದ್ಭವಿಸುತ್ತಿದೆ ಎಂದಿದ್ದಾರೆ.

ಮಕ್ಕಳ ಬಾಲ್ಯದ ಹಕ್ಕು ಕಸಿಯಲಾಗದು
Post

ಮಕ್ಕಳ ಬಾಲ್ಯದ ಹಕ್ಕು ಕಸಿಯಲಾಗದು

ಸಂವಿಧಾನದ ಆಶಯದಂತೆ ಪ್ರತಿಯೊಂದು ಮಗುವಿಗೂ ಬಾಲ್ಯ ಅನುಭವಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದ್ದಾರೆ.

ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿ ಪುನೀತ್ ಪುತ್ಥಳಿ
Post

ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿ ಪುನೀತ್ ಪುತ್ಥಳಿ

ನಿಟುವಳ್ಳಿಯ ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿನ ಬನ್ನಿ ಮಹಾಂಕಾಳಿ ದೇವಸ್ಥಾನದ ಹತ್ತಿರ ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗವು ಸ್ಥಾಪಿಸಿರುವ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಇಂದು ಅನಾವರಣಗೊಂಡಿತು.

70 ಕೋಟಿ ರೂ. ವೆಚ್ಚದಲ್ಲಿ ಜವಳಿ ಪಾರ್ಕ್
Post

70 ಕೋಟಿ ರೂ. ವೆಚ್ಚದಲ್ಲಿ ಜವಳಿ ಪಾರ್ಕ್

ರಾಣೇಬೆನ್ನೂರು : 70 ಕೋಟಿ ರೂ. ವೆಚ್ಚದಲ್ಲಿ ತುಮ್ಮಿನಕಟ್ಟೆ ಸಮೀಪದ ಮಾಳನಾಯ್ಕನಹಳ್ಳಿಯಲ್ಲಿ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ಶಾಸಕ ಅರುಣಕುಮಾರ್ ಪೂಜಾರ ಹೇಳಿದರು.

ದೂಡಾ ಯೋಜನೆ: ಜಮೀನು ನೀಡಲು ರೈತರ ಸಮ್ಮತಿ
Post

ದೂಡಾ ಯೋಜನೆ: ಜಮೀನು ನೀಡಲು ರೈತರ ಸಮ್ಮತಿ

ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ಧಿ ಪಡಿಸಲು ಕುಂದುವಾಡ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿನ ಒಟ್ಟು 53 ಎಕರೆ 19.8 ಗುಂಟೆ ಜಮೀನು ನೀಡಲು ರೈತರು ಸಮ್ಮತಿಸಿದ್ದಾರೆ ಎಂದು ದೂಡಾ ಅಧ್ಯಕ್ಷ  ದೇವರಮನಿ ಶಿವಕುಮಾರ್ ತಿಳಿಸಿದ್ದಾರೆ.

ಆಶ್ರಯ ಮನೆಗಳ ಖಾತೆ, ಒತ್ತುವರಿ ಜಮೀನು ಹಂಚಿಕೆ
Post

ಆಶ್ರಯ ಮನೆಗಳ ಖಾತೆ, ಒತ್ತುವರಿ ಜಮೀನು ಹಂಚಿಕೆ

ಹರಿಹರ : ನಗರಸಭೆಯ ವತಿಯಿಂದ ಆಶ್ರಯ ಕಾಲೋನಿ ಮತ್ತು ಇತರೆ ಸ್ಲಂ ನಿವಾಸಿಗಳು ತಮ್ಮ ಹೆಸರಿನ ಹಕ್ಕು ಪತ್ರವನ್ನು ಬೇರೆಯವರ ಹೆಸರಿನವರಿಗೆ ಖಾತೆ ಮಾಡಲು ನಗರಸಭೆಗೆ 90 ಸಾವಿರ ರೂ. ಕಟ್ಟಲು ತಿಳಿಸುತ್ತಿರುವುದಕ್ಕೆ ಶಾಸಕ ಎಸ್. ರಾಮಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.