Day: January 7, 2022

Home 2022 January 07 (Friday)
ಮಂಗೋಲಿಯಾದಿಂದ ಬಂದ ಪಟ್ಟೆತಲೆ ಹೆಬ್ಬಾತುಗಳು
Post

ಮಂಗೋಲಿಯಾದಿಂದ ಬಂದ ಪಟ್ಟೆತಲೆ ಹೆಬ್ಬಾತುಗಳು

ಸಾವಿರಾರು ಕಿಲೋ ಮೀಟರ್ ದೂರದ ಮಂಗೋಲಿಯಾದಿಂದ ದಾವಣಗೆರೆ ಸಮೀಪದ ಕೊಂಡಜ್ಜಿ ಕೆರೆಗೆ  ಪಟ್ಟೆ ತಲೆ ಹೆಬ್ಬಾತು (ಬಾರ್‌ ಹೆಡೆಡ್‌ ಗೂಸ್‌)ಗಳು ಆಗಮಿಸಿದ್ದು, ಪಕ್ಷಿ ಪ್ರೇಮಿಗಳ ಗಮನ ಸೆಳೆಯುತ್ತಿವೆ.

ಅನ್ನದಾತನ ಅಂಗಳಕ್ಕೆ ಬೆಳ್ಳಕ್ಕಿ ಬಳಗ …
Post

ಅನ್ನದಾತನ ಅಂಗಳಕ್ಕೆ ಬೆಳ್ಳಕ್ಕಿ ಬಳಗ …

ಉಕ್ಕಡಗಾತ್ರಿ ಸಮೀಪ ತುಂಗಭದ್ರಾ ನದಿ ಆಶ್ರಿತ ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ರೈತರು ಟ್ರ್ಯಾಕ್ಟರ್‌ನಲ್ಲಿ ಜಮೀನು ಹದಗೊಳಿಸುತ್ತಿರುವ ಸಂದರ್ಭದಲ್ಲಿ ಭೂಮಿಯಲ್ಲಿದ್ದ ಹುಳುಗಳನ್ನು ಹೆಕ್ಕಲು ಧಾವಿಸಿರುವ ಬೆಳ್ಳಕ್ಕಿಗಳು.

ವಾರಾಂತ್ಯದ ಪ್ರಯಾಣಕ್ಕೆ ಪ್ರಯಾಸ
Post

ವಾರಾಂತ್ಯದ ಪ್ರಯಾಣಕ್ಕೆ ಪ್ರಯಾಸ

ವಾರಾಂತ್ಯದ ಕರ್ಫ್ಯೂ ಇಂದು ಶುಕ್ರವಾರ ರಾತ್ರಿಯಿಂದ ಆರಂಭವಾಗಲಿದ್ದು, ವಾರಾಂತ್ಯದ ಪ್ರಯಾಣ ಮಾಡುವವರು ಮುನ್ನೆಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಸರ್ಕಾರಿ ಬಸ್‌ಗಳು ವಿರಳವಾಗುವ ಸಾಧ್ಯತೆ ಇದ್ದರೆ, ಖಾಸಗಿ ಬಸ್‌ಗಳು ಬೀದಿಗಿಳಿಯು ವುದು ಬಹುತೇಕ ಅನುಮಾನವಾಗಿದೆ.

ಜಿಲ್ಲಾಭಿವೃದ್ಧಿಗೆ 2,500 ಕೋಟಿ ಅನುದಾನ
Post

ಜಿಲ್ಲಾಭಿವೃದ್ಧಿಗೆ 2,500 ಕೋಟಿ ಅನುದಾನ

ಹರಿಹರ : ತಾಲ್ಲೂಕಿನಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಮಳೆ ಬಂದು ಹಲವಾರು ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿದ್ದರಿಂದ ಸರ್ಕಾರಕ್ಕೆ ಒತ್ತಾಯ ಮಾಡಿ 6 ಕೋಟಿ ರೂ. ಬಿಡುಗಡೆ ಮಾಡಿಸಿ, ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ರಾಂಪುರ ಹಾಲಸ್ವಾಮಿ ಮಠದ ಉತ್ತರಾಧಿಕಾರಿ  ನೇಮಕ ಇತ್ಯರ್ಥ
Post

ರಾಂಪುರ ಹಾಲಸ್ವಾಮಿ ಮಠದ ಉತ್ತರಾಧಿಕಾರಿ ನೇಮಕ ಇತ್ಯರ್ಥ

ಹೊನ್ನಾಳಿ : ಬುಧವಾರ ಯಾವುದೇ ತೀರ್ಮಾನ ಕೈಗೊಳ್ಳದೇ ಅಪೂರ್ಣಗೊಂಡಿದ್ದ ತಾಲ್ಲೂಕಿನ ರಾಂಪುರ ಹಾಲಸ್ವಾಮಿ ಮಠದ ಉತ್ತರಾಧಿಕಾರಿ ಸಭೆಯನ್ನು ಇಂದು ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಸಲಾಯಿತು.

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೊಂದಲು ಕರೆ
Post

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೊಂದಲು ಕರೆ

ಹರಿಹರ : ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ, ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಹೊಂದಬೇಕು ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದ್ದಾರೆ.

ಹಳ್ಳಿಗಳಲ್ಲಿ ಮೌಢ್ಯ ವಿನಾಶದ ಕ್ರಾಂತಿಯಾದಾಗ ಪ್ರಗತಿ ಸಾಧ್ಯ
Post

ಹಳ್ಳಿಗಳಲ್ಲಿ ಮೌಢ್ಯ ವಿನಾಶದ ಕ್ರಾಂತಿಯಾದಾಗ ಪ್ರಗತಿ ಸಾಧ್ಯ

ಮಲೇಬೆನ್ನೂರು : ಮೌಢ್ಯವನ್ನು ಬಹಳವಾಗಿ ವಿರೋಧಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರನ್ನು ಸ್ಮಶಾನಕ್ಕೆ ನಾಮಕರಣ ಮಾಡಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ.ರಾಮಚಂದ್ರಪ್ಪ ಹೇಳಿದರು.

ಅನುದಾನಕ್ಕೆ ಸಿಎಂ ಬಳಿ ರಾಮಪ್ಪ ಮನವಿ
Post

ಅನುದಾನಕ್ಕೆ ಸಿಎಂ ಬಳಿ ರಾಮಪ್ಪ ಮನವಿ

ಹರಿಹರ : ಶಾಸಕ ಎಸ್. ರಾಮಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ, ಹರಿಹರ ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಲು ವಿನಂತಿಸಿಕೊಂಡಿದ್ದಾರೆ.

ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯ ಆದರ್ಶ ಎಲ್ಲರಿಗೂ ಮಾದರಿ
Post

ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯ ಆದರ್ಶ ಎಲ್ಲರಿಗೂ ಮಾದರಿ

ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಸದುದ್ಧೇಶದಿಂದ  ಶಾಲೆ ತೆರೆಯುವ ಮೂಲಕ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ ಮತ್ತು ದೇಶದ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ

ಆರೋಗ್ಯ ಸುಸ್ಥಿತಿಯಲ್ಲಿರಲು  ಸೂರ್ಯ ನಮಸ್ಕಾರ ನೆರವು
Post

ಆರೋಗ್ಯ ಸುಸ್ಥಿತಿಯಲ್ಲಿರಲು ಸೂರ್ಯ ನಮಸ್ಕಾರ ನೆರವು

ಹೊನ್ನಾಳಿ : ಜಗತ್ತಿನ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಸೂರ್ಯನಿಗೆ ಯಾವುದೇ ಜಾತಿ, ಧರ್ಮವಿಲ್ಲ.  ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ.