ಹಾಡಹಗಲೇ ಶಿಕ್ಷಕಿಯ ಸರ ಅಪಹರಣ

ದಾವಣಗೆರೆ, ಜ.5- ಪಾದಚಾರಿ ಸರ್ಕಾರಿ ಶಾಲೆಯ ಶಿಕ್ಷಕಿಯೋರ್ವರ ಕೊರಳಲ್ಲಿದ್ದ ಬಂಗಾರದ ಸರವನ್ನು ಹಾಡಹಗಲೇ ಅಪಹರಿಸಿರುವ ಘಟನೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ವಿನಾಯಕ ಬಡಾವಣೆ ಮೊದಲನೇ ಕ್ರಾಸ್ ವಾಸಿ ಸರಸ್ವತಿ ಸರ ಅಪಹರಣಕ್ಕೊಳಗಾದ ಶಿಕ್ಷಕಿ. ತಮ್ಮ ಕರ್ತವ್ಯ ಮುಗಿಸಿ ಬಸ್ ನಲ್ಲಿ ಬಂದು ವಿದ್ಯಾನಗರ ಬಸ್ ನಿಲ್ದಾಣದಲ್ಲಿ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

ಆ ಪ್ರದೇಶದಲ್ಲಿ ಜನರ ಓಡಾಟ ವಿರಳವಾಗಿದ್ದನ್ನು ಗಮನಿಸಿದ ಸರಗಳ್ಳನೋರ್ವ ಹಿಂದಿನಿಂದ ಬಂದು ಶಿಕ್ಷಕಿಯ ಕೊರಳಲ್ಲಿದ್ದ 6 ತೊಲದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published.