`ಮುದುಕನ ಮದುವೆ’ ನಾಟಕ ಪ್ರದರ್ಶನವನ್ನು ಉದ್ಘಾಟನಾ ಸಮಾರಂಭದಲ್ಲಿ ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ವ್ಯಾಕುಲತೆ
ದಾವಣಗೆರೆ, ಡಿ.30- ವೃತ್ತಿ ರಂಗ ಭೂಮಿ ಕಲಾವಿದರ ಬದುಕು ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಕಲಾವಿದ ರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಬೇಸರ ವ್ಯಕ್ತಪಡಿಸಿದರು.
ನಗರದ ಟಿಎಪಿಎನ್ ಕಾಂಪೌಂಡ್ನಲ್ಲಿ ಶ್ರೀ ಕುಮಾರ ವಿಜಯ ನಾಟಕ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ `ಮುದುಕನ ಮದುವೆ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ನಾಟಕ ಕಂಪನಿಗಳು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಯಶಸ್ಸನ್ನು ಕಂಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕಗಳಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗದೇ ಕಲಾವಿದರ ಜೀವನ ದುಸ್ಥಿತಿಗೆ ಬಂದು ನಿಂತಿದೆ ಎಂದರು.
ದಾವಣಗೆರೆ ರಂಗಭೂಮಿ ಕಲಾವಿ ದರನ್ನು ಮೊದಲಿನಿಂದಲೂ ಪ್ರೋತ್ಸಾಹಿ ಸುತ್ತಾ ಬಂದಿದೆ. ಇಲ್ಲಿನ ಜನ ಕೂಡ ಕಲಾವಿದರಿಗೆ ಆಶ್ರಯ ನೀಡುವ ಜೊತೆಗೆ ಸಂಕಷ್ಟದ ದಿನಗಳಲ್ಲಿ ಸಹಾಯ ಹಸ್ತ ಚಾಚಿದ್ದಾರೆ ಎಂದು ಹೇಳಿದರು.
ನಾಟಕಗಳನ್ನು ಹೆಚ್ಚು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ, ನಾಟಕ ಕಂಪನಿ ಮಾಲೀಕರಿಗೆ, ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡುವ ಅಗತ್ಯವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶರಾವ್ ಜಾಧವ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಆಶಾ ಮುರುಳಿ, ಕವಿತಾ, ಶುಭಮಂಗಳ, ದಾಕ್ಷಾಯಿಣಮ್ಮ, ಕುಮಾರ ವಿಜಯ ನಾಟಕ ಸಂಘದ ಸಂಚಾಲಕ ಜಾಲ್ಯಾಳ್ ಮಂಜುನಾಥ್, ವ್ಯವಸ್ಥಾಪಕ ದೇವಗಿರಿ ಸತೀಶ್, ಜಾಲ್ಯಾಳ್ ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.
ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ. ಭದ್ರಪ್ಪ ಭದ್ರಣ್ಣ ನವರ್ ಅಧ್ಯಕ್ಷತೆ ವಹಿಸಿದ್ದರು. ಕಲಾ ವಿದ ಮಹೇಶ್ವರಪ್ಪ ಸ್ವಾಗತಿಸಿದರು.