ಹೊನ್ನಾಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ದೇವೇಂದ್ರಯ್ಯ

ಹೊನ್ನಾಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ದೇವೇಂದ್ರಯ್ಯ

ಹೊನ್ನಾಳಿ, ನ.23-  ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಕೆ.ಪಿ. ದೇವೇಂದ್ರಯ್ಯ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಮಿತಿ ನೇಮಕ ಮಾಡಿದ್ದು, ಶ್ರೀಗಳು ತಮ್ಮ ಆಯ್ಕೆಗೆ ಸಮ್ಮತಿ ವ್ಯಕ್ತಪಡಿಸಿ ಶರಣ ಸಾಹಿತ್ಯ ಪರಿಷತ್‌ನ ಅಭಿವೃದ್ಧಿಗೆ ಸರ್ವರೂ ಕೈ ಜೋಡಿಸೋಣ ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಸಾಹಿತಿ ಯು.ಎನ್. ಸಂಗನಾಳ್ ಮಠ, ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಿದ್ಧಯ್ಯ, ಕಾರ್ಯದರ್ಶಿ ಹೇಮಲತಾ, ಸದಸ್ಯರಾದ ಜಿ. ಮುರುಗೇಂದ್ರಪ್ಪ ಗೌಡ, ಧನಂಜಯಪ್ಪ, ಮೃತ್ಯುಂಜಯ ಪಾಟೀಲ್, ಗೋವಿಂದಪ್ಪ, ಕೆ.ರುದ್ರಪ್ಪ, ಸುನಂದ ಇನ್ನಿತರರಿದ್ದರು.

Leave a Reply

Your email address will not be published.