Day: November 24, 2021

Home 2021 November 24 (Wednesday)
ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ನಾಮಪತ್ರ ಸಲ್ಲಿಕೆ
Post

ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ನಾಮಪತ್ರ ಸಲ್ಲಿಕೆ

ಚಿತ್ರದುರ್ಗ - ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ಅವರು ಚಿತ್ರದುರ್ಗದಲ್ಲಿ ಇಂದು ಏರ್ಪಾಡಾಗಿದ್ದ ಬೃಹತ್ ಮೆರವಣಿಗೆ  ಮೂಲಕ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.

ಒಂಟಿ ಮಹಿಳೆಯ ಮೇಲೆ ಹಲ್ಲೆ : ದರೋಡೆ
Post

ಒಂಟಿ ಮಹಿಳೆಯ ಮೇಲೆ ಹಲ್ಲೆ : ದರೋಡೆ

ದೇವಸ್ಥಾನದಿಂದ ಮನೆಗೆ ಸಾಗುತ್ತಿದ್ದ ಒಂಟಿ ಮಹಿಳೆಯ ಮೇಲೆ ಹಾಡಹಗಲೇ ಹಲ್ಲೆ ನಡೆಸಿ, ಡಕಾಯಿತಿ ಮಾಡಿದ್ದ ಏಳು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಚನ್ನಗಿರಿ ಮತ್ತು ಸಂತೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದು, ಘಟನೆ ನಡೆದ ಒಂದು ಗಂಟೆಯಲ್ಲೇ ಪ್ರಕರಣವನ್ನು ಬೇಧಿಸಿದ್ದಾರೆ.

ಜಲಸಸ್ಯ ರಾಶಿ ತೆರವು  ಕಾರ್ಯ  ಮುಂದುವರಿಕೆ
Post

ಜಲಸಸ್ಯ ರಾಶಿ ತೆರವು ಕಾರ್ಯ ಮುಂದುವರಿಕೆ

ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯದ ಗೋಡ್ ಬಳೆ ಗೇಟ್ ಬಳಿ ಸಂಗ್ರಹವಾಗಿರುವ ಜಲ ಸಸ್ಯರಾಶಿಯನ್ನು ತೆರವು ಗೊಳಿಸುವ ಕಾರ್ಯ ಎರಡನೇ ದಿನವಾದ ಮಂಗಳವಾರವೂ ನಡೆಯಿತು. ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಆಗಮಿಸಿ ಕಾಮಗಾರಿ ವೀಕ್ಷಿಸಿದರು.

ಯುವ ಜನತೆಯನ್ನು ದೇಶದ ಸತ್ಪ್ರಜೆಯಾಗಿ ರೂಪಿಸುವಲ್ಲಿ ಎನ್.ಸಿ.ಸಿ. ಪಾತ್ರ ಪ್ರಮುಖ
Post

ಯುವ ಜನತೆಯನ್ನು ದೇಶದ ಸತ್ಪ್ರಜೆಯಾಗಿ ರೂಪಿಸುವಲ್ಲಿ ಎನ್.ಸಿ.ಸಿ. ಪಾತ್ರ ಪ್ರಮುಖ

ಎನ್.ಸಿ.ಸಿ.ಯು  ಶಿಸ್ತು, ಸ್ವಾಭಿಮಾನ, ಏಕತೆ ಮೌಲ್ಯಗಳ ಸಂಕೇತ ವಾಗುವುದರ ಜೊತೆಗೆ ಯುವ ಜನತೆಯನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ  ಎಂದು ಬ್ರಿಗೇಡಿಯರ್ ಸುನಿಲ್ ಶೆರೋನ್ ನುಡಿದರು.

ಸಂಗನಬಸವ ಶ್ರೀಗಳಿಂದ ಶಿಕ್ಷಣ ಕ್ರಾಂತಿ
Post

ಸಂಗನಬಸವ ಶ್ರೀಗಳಿಂದ ಶಿಕ್ಷಣ ಕ್ರಾಂತಿ

ಚಿತ್ರದುರ್ಗ : ಉತ್ತರ ಕರ್ನಾಟಕ ಭಾಗದಲ್ಲಿ ಹಾಲಕೆರೆಯ ಡಾ. ಸಂಗನಬಸವ ಮಹಾಸ್ವಾಮಿಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಹರಪನಹಳ್ಳಿಯಲ್ಲಿ  ಶ್ರೀ ಮೇದಾರ ಕೇತೇಶ್ವರ ಜಯಂತಿ
Post

ಹರಪನಹಳ್ಳಿಯಲ್ಲಿ ಶ್ರೀ ಮೇದಾರ ಕೇತೇಶ್ವರ ಜಯಂತಿ

ಹರಪನಹಳ್ಳಿ : ಪಟ್ಟಣದ ಐಯ್ಯನಕೆರೆ ಬಳಿ ಶ್ರೀ ಮೇದಾರ ಕೇತೇಶ್ವರರವರ 891 ನೇ ಜಯಂತಿ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸ ಲಾಗಿತ್ತು

ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ
Post

ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ

ರಾಣೇಬೆನ್ನೂರು : ಇಲ್ಲಿನ ಖನ್ನೂರ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ  ಕಾಮರ್ಸ್ ಫೋರಂ (ವಾಣಿಜ್ಯ ವೇದಿಕೆ) ಮತ್ತು ಲೋಗೋವನ್ನು  ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. 

ಮನುಷ್ಯ ಬೆಳೆದಂತೆ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿವೆ
Post

ಮನುಷ್ಯ ಬೆಳೆದಂತೆ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿವೆ

ಹರಪನಹಳ್ಳಿ : ವೈಜ್ಞಾನಿಕವಾಗಿ ಮನುಷ್ಯ ಬೆಳೆದಂತೆ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿದ್ದು, ಅದರಲ್ಲಿ ಮಹಿಳೆಯರೇ ಹೆಚ್ಚಾಗಿ ಸೈಬರ್ ಅಪರಾಧಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ ಎಂದು ಸಿಪಿಐ ನಾಗರಾಜ್‌ ಕಮ್ಮಾರ ಕಳವಳ ವ್ಯಕ್ತ ಪಡಿಸಿದರು.

ರಸ್ತೆಯೇ ಕಣ…
Post

ರಸ್ತೆಯೇ ಕಣ…

ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆಯನ್ನು ಕಳೆದುಕೊಂಡ ರೈತರು, ಜಮೀನಿನಲ್ಲಿ ನೀರು ನಿಂತಿರುವ ಕಾರಣ, ಉಳಿದ ಅಷ್ಟೋ ಇಷ್ಟು ಬೆಳೆಯನ್ನು ಕೊಯ್ದು ತಂದು ರಸ್ತೆಯಲ್ಲಿ ಒಣಗಿಸುತ್ತಿದ್ದಾರೆ. ಕೊಂಡಜ್ಜಿ ಗ್ರಾಮದ ಬಳಿಯ ಚಿತ್ರಣವಿದು.