ಸಂಗನಬಸವ ಶ್ರೀಗಳ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ಸಂತಾಪ

ಸಂಗನಬಸವ ಶ್ರೀಗಳ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ಸಂತಾಪ

ರಂಭಾಪುರಿ ಪೀಠ (ಬಾಳೆಹೊನ್ನೂರು) ನ. 22- ಹೊಸಪೇಟೆ ಕೊಟ್ಟೂರಸ್ವಾಮಿ ಮಠದ ಮತ್ತು ಹಾಲಕೆರೆ ವಿರಕ್ತಮಠದ ಮಠಾಧ್ಯಕ್ಷರಾದ ಡಾ. ಸಂಗನಬಸವ ಸ್ವಾಮಿಗಳವರ ಅಗಲಿಕೆಗೆ ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ವೀರಶೈವ ಧರ್ಮ ಸಂಸ್ಕೃತಿಯ ಪುನರುತ್ಥಾನದ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಗಳವರು ಧಾರ್ಮಿಕ, ಸಾಮಾಜಿಕ,  ಶೈಕ್ಷಣಿಕವಾಗಿ ಬಹಳಷ್ಟು ಶ್ರಮಿಸಿದ್ದನ್ನು ಮರೆಯಲಾಗದು. ಶ್ರೀಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷರಾಗಿ ಸಮಾಜದ ಒಗ್ಗಟ್ಟಿಗೆ ಶ್ರಮಿ ಸಿದ್ದನ್ನು ಸ್ಮರಿಸಿಕೊಂಡ ಜಗದ್ಗುರುಗಳು, ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಿಂದ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯಿತ್ತು ಪುರಸ್ಕರಿಸಿದ್ದನ್ನು ಜಗದ್ಗುರುಗಳು ನೆನಪಿಸಿದ್ದಾರೆ. 

ಶ್ರೀಗಳವರ ಅಗಲಿಕೆಯಿಂದ ಹಳೆ ತಲೆಮಾರಿನ ಮತ್ತೊಂದು ಕೊಂಡಿ ಕಳಚಿ ಬಿದ್ದಂತಾಗಿದೆ. ಲಿಂ.ಹಾನಗಲ್ಲ ಕುಮಾರಸ್ವಾಮಿಗಳವರ ಆದರ್ಶ ಧ್ಯೇಯದಂತೆ ಮುನ್ನಡೆದು ಸಕಲ ಸದ್ಭಕ್ತರ ಗೌರವಾದರಗಳಿಗೆ ಪಾತ್ರರಾಗಿ ದ್ದರು.   ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.