ಮಹೇಶ್‌ ಜೋಷಿ, ರುದ್ರಪ್ಪ ಗೆಲುವು ; ಸಂಭ್ರಮ

ಮಹೇಶ್‌ ಜೋಷಿ, ರುದ್ರಪ್ಪ ಗೆಲುವು ; ಸಂಭ್ರಮ

ಹರಪನಹಳ್ಳಿ, ನ.22- ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೇಂದ್ರಕ್ಕೆ ನಾಡೋಜ ಮಹೇಶ್ ಜೋಷಿ, ಅಖಂಡ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾದ ನಿಷ್ಟಿ ರುದ್ರಪ್ಪನವರ ಗೆಲುವಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ  ಸೋಮವಾರ ಕಸಾಪ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ವಿಜಯೋತ್ಸವ ಆಚರಿಸಿದರು.

ಇಬ್ಬರೂ  ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿ ಅನುಭವವುಳ್ಳವರಾಗಿದ್ದು, ನಾಡಿನುದ್ದಕ್ಕೂ  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವಲ್ಲಿ  ಶ್ರಮ ವಹಿಸುತ್ತಾರೆ ಎಂಬ ವಿಶ್ವಾಸವನ್ನು ಅವರುಗಳು ವ್ಯಕ್ತಪಡಿಸಿದರು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರುಗಳಾದ ಬಿ.ರಾಮಪ್ರಸಾದ್ ಗಾಂಧಿ, ಎಚ್. ಮಲ್ಲಿಕಾರ್ಜುನ್, ಡಿ.ರಾಮನಮಲಿ, ಹಿರಿಯ ಸದಸ್ಯರುಗಳಾದ ಇಸ್ಮಾಯಿಲ್ ಎಲಿಗಾರ್, ಬಸವರಾಜ್ ಸಂಗಪ್ಪನವರ್, ಕೋರಿಶೆಟ್ಟಿ ಉಚ್ಚೆಂಗೆಪ್ಪ, ಹೇಮಣ್ಣ ಮೋರಿಗೇರಿ, ಸುರೇಶ್ ಮಂಡಕ್ಕಿ ಹಾಗೂ ಶಿಕ್ಷಕರುಗಳಾದ  ಬಿ.ರಾಜಶೇಖರ್, ಮಾದಿಹಳ್ಳಿ ಮಂಜುನಾಥ್, ನಾಗರಾಜ್‌ ಮಡ್ಡಿ, ಷಣ್ಮುಖಪ್ಪ, ಮಕ್ಬೂಲ್ ಭಾಷಾ, ಗಣೇಶಪ್ಪ ಮತ್ತು ಉಪನ್ಯಾಸಕ ಮಾಳ್ಗಿ ಮಂಜುನಾಥ್, ಪಿ.ಜಗದೀಶ್, ಆನಂದ್, ನಾಗರಾಜ ನಾಯ್ಕ್, ಇತರರು ಪಾಲ್ಗೊಂಡಿದ್ದರು.