ಪಿಎಲ್‌ಡಿ ಬ್ಯಾಂಕ್‍ನ ಸರ್ವ ಸದಸ್ಯರ ಸಭೆ

ಪಿಎಲ್‌ಡಿ ಬ್ಯಾಂಕ್‍ನ ಸರ್ವ ಸದಸ್ಯರ ಸಭೆ

ದಾವಣಗೆರೆ, ನ.22 – ದಾವಣಗೆರೆ ಪ್ರಾಥಮಿಕ ಸಹಕಾರಿ ಮತ್ತು ಕೃಷಿ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ( ಪಿ.ಎಲ್.ಡಿ ಬ್ಯಾಂಕ್ ) 2021 – 22 ನೇ ಸಾಲಿನಲ್ಲಿ 1 ಕೋಟಿ 66 ಲಕ್ಷ ರೂ ಗಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಿ.ಎ. ಮಂಜುನಾಥ ಅವರು ನಗರದ ಶ್ರೀ ತರಳಬಾಳು ಸಭಾ ಭವನದಲ್ಲಿ ನಡೆದ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು . 

2483 ಸದಸ್ಯರನ್ನು ಹೊಂದಿರುವ ಬ್ಯಾಂಕ್ 84 ನೇ ವರ್ಷಕ್ಕೆ ಕಾಲಿಡುತ್ತಿದೆ. ಸದಸ್ಯರಿಗೆ 3,01,77,998 ರೂ ಗಳ ಸಾಲವನ್ನು ನೀಡಿದೆ. ಸಾಲ ವಸೂಲಾತಿ ಪ್ರಮಾಣ ಶೇ 76.51 ಇದ್ದು, 30.06.2021 ರ ಅಂತ್ಯಕ್ಕೆ ಶೇ 56.17 ಇದೆ ಎಂದು ವಿವರಿಸಿದರು . 

ಬ್ಯಾಂಕಿನ ಸದಸ್ಯರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಕಾರಣರಾಗಲು ವಿನಂತಿಸಿದರು. ಸದಸ್ಯರಿಗೆ ಅನುಕೂಲ ವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಈ – ಸ್ಟ್ಯಾಂಪಿಂ ಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ.

ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀಮತಿ ಟಿ.ಎಂ. ಸವಿತ, ನಿರ್ದೇಶಕರಾದ ಆರ್.ಜಿ. ಕುಬೇಂದ್ರಪ್ಪ, ಕೆ.ಎಂ. ರೇವಣಸಿದ್ದಪ್ಪ, ಎ.ಎಂ. ಮಂಜುನಾಥ, ಬಿ.ಎಸ್. ರಮೇಶ್, ಕೆ. ಬಸವರಾಜಪ್ಪ, ವೈ.ಬಿ. ನಾಗರಾಜ, ಎಂ.ಪಿ. ಶಿವಕುಮಾರ್, ರಾಜಪ್ಪ , ಶ್ರೀಮತಿ ರೇಣುಕಮ್ಮ, ಸಿ.ಯು. ಜ್ಯೋತಿ, ವಿ ಕಾಳಮ್ಮ, ಪ್ರಭಾರ
ವ್ಯವಸ್ಥಾಪಕರಾದ ಶ್ರೀಮತಿ ಎಸ್. ಸ್ಮಿತಾ ಪಾಟೀಲ್ ಮತ್ತಿತರರಿದ್ದರು.

Leave a Reply

Your email address will not be published.