ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ

ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ

ದಾವಣಗೆರೆ, ನ.21- ದೇವರ ಬೆಳಕೆರೆ ಪಿಕಪ್ ಡ್ಯಾಂ ಹಿನ್ನೀರು ಹೆಚ್ಚಾದ ಪರಿಣಾಮ 200 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ದಾವಣಗೆರೆಯ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಗಿರೀಶ್, ಹಿನ್ನೀರು ಹೆಚ್ಚಾಗಿ ಜಮೀನುಗಳು ಮುಳುಗಡೆಯಾಗಿದ್ದನ್ನು ಕಂಡು ಹರಿಹರ ತಹಶೀಲ್ದಾರ್ ಹಾಗೂ ಎಂಜಿನಿಯರ್‌ಗಳೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಜಮೀನು ವೀಕ್ಷಿಸಲೆಂದು ಹೋದ ರೈತರು ಜಮೀನು ಮುಳುಗಡೆಯಾಗಿ ಮನನೊಂದು ಹಿಂತಿರುಗಿ ಮನೆಗೆ ಬಾರದೇ ಇರುವ ನಿರ್ಧಾರ ಕೈಗೊಂಡಿದ್ದಾಗ, ತಹಶೀಲ್ದಾರರು ಮನವೊಲಿಸಿ ರೈತರನ್ನು ತೆಪ್ಪದ ಮೂಲಕ ಕರೆ ತರುವ ಪ್ರಯತ್ನದಲ್ಲಿ ಸಫಲರಾದರು. 

ಪ್ರತಿ ವರ್ಷವೂ ಇದೇ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.