ಪುನೀತ್ ಅಭಿಮಾನಿಗಳಿಂದ ವಿವಿಧೆಡೆ ಅನ್ನ ಸಂತರ್ಪಣೆ

ಪುನೀತ್ ಅಭಿಮಾನಿಗಳಿಂದ ವಿವಿಧೆಡೆ ಅನ್ನ ಸಂತರ್ಪಣೆ

ದಾವಣಗೆರೆ, ನ.9- ಪುನೀತ್ ರಾಜಕುಮಾರ್ ಪುಣ್ಯತಿಥಿ ಅಂಗವಾಗಿ ನಗರದ ವಿವಿಧೆಡೆ ಇಂದು ಪುನೀತ್ ಅಭಿಮಾನಿಗಳು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುವ ಮುಖೇನ ಅಗಲಿದ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ.

ಕೆಟಿಜೆ ನಗರ 15ನೇ ಕ್ರಾಸ್‍ನಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಫ್ರೆಂಡ್ಸ್ ಗ್ರೂಪ್‍ನಿಂದ ಸಾರ್ವಜನಿಕರಿಗೆ ಅನ್ನ ದಾಸೋಹ ಕಾರ್ಯ ನಡೆಯಿತು. 

ವರನಟ ಡಾ. ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ತಮ್ಮ ಅಭಿಮಾನ ಮೆರೆದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಆನಂದರಾಜ, ಜಗನ್ನಾಥ, ವೆಂಕಟೇಶ, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಬಿಜೆಪಿ ಮುಖಂಡ ಅಕ್ಕಿ ಪ್ರಭು ಕಲ್ಬುರ್ಗಿ, ಕಾಂಗ್ರೆಸ್ ಯುವ ಮುಖಂಡ ಚೈತನ್ಯ ಕುಮಾರ್ ಮೇಸಿ, ಪತ್ರಕರ್ತ ನಾಗರಾಜ ಬಡದಾಳ್, ರಾಜು ರೇಡಿಯಂ, ಕಾರ್ತಿಕ್, ನಾಗರಾಜ, ಸತ್ಯಣ್ಣ, ಮನು, ಅಜ್ಜಯ್ಯ, ಸಂತೋಷ, ಮಂಜಪ್ಪ, ಚಂದ್ರು ಕ್ಯಾಂಟೀನ್, ದೌಲತ್ ರಾವ್, ಪ್ರಕಾಶ, ಸುರೇಶ, ರಘು, ಸಾಲೇಶ್ವರ, ಪರಮೇಶಿ ಸೇರಿದಂತೆ ಇತರರಿದ್ದರು. 

ಅಂತೆಯೇ ನಗರದ ಆರ್ ಟಿಒ ಕಚೇರಿ ಸಮೀಪದಲ್ಲಿ ಶಂಕರ್ ಎಂಬ ಪುನೀತ್ ಅಭಿಮಾನಿ ಸಾರ್ವಜನಿಕರಿಗೆ ಕೇಸರಿ ಬಾತ್ ನೀಡುವ ಮೂಲಕ ಸ್ಮರಿಸಿದರು. ಈರುಳ್ಳಿ ಮಾರುಕಟ್ಟೆ, ಜಯದೇವ ವೃತ್ತ ಸೇರಿದಂತೆ ವಿವಿಧೆಡೆ ಪುನೀತ್ ಅಭಿಮಾನಿಗಳು ಅನ್ನ ಸಂತರ್ಪಣೆ ಏರ್ಪಡಿಸಿದ್ದರು.