ದಾವಣಗೆರೆ ಸಿಟಿ ಶಾಮನೂರು ಎಸ್.ಎಸ್. ಮಲ್ಲಿಕಾರ್ಜುನ ಬಡಾವಣೆ, ದೇವರಬೆಳೆಕೆರೆ ರಸ್ತೆಯ ವಾಸಿ ರೈಲ್ವೆ ಇಲಾಖೆ ನಿವೃತ್ತ ಒ.ಎಸ್. ಆಗಿದ್ದ ಶ್ರೀ ಜೆ. ಶಿವಮೂರ್ತಿ ಅವರು ದಿನಾಂಕ 30.08.2021ರ ಸೋಮವಾರ ಮಧ್ಯಾಹ್ನ 2.20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 31.08.2021ರ ಮಂಗಳವಾರ ಬೆಳಿಗ್ಗೆ 11.30 ಕ್ಕೆ ಶಾಮನೂರಿನ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.