ವೀರಶೈವ ಪುಣ್ಯಾಶ್ರಮದಲ್ಲಿ ಪ್ರವಚನ

ವೀರಶೈವ ಪುಣ್ಯಾಶ್ರಮದಲ್ಲಿ ಪ್ರವಚನ

ದಾವಣಗೆರೆ, ಆ.19- ನಗರದ ಬಾಡಾ ಕ್ರಾಸ್ ಬಳಿಯಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಕಳೆದ ವಾರ ಏರ್ಪಡಿಸಿದ್ದ ಲಿಂ. ಪುಟ್ಟರಾಜ ಗವಾಯಿಗಳ ಪ್ರವಚನ ಕಾರ್ಯಕ್ರಮವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಮತ್ತು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ, ಸಹ ಕಾರ್ಯದರ್ಶಿ ಜೆ. ಎನ್. ಕರಿಬಸಪ್ಪ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಮತ್ತಿತರರು ಆಗಮಿಸಿದ್ದರು.  ಪುರಾಣ ಪ್ರವಚನವನ್ನು ವೇದಮೂರ್ತಿ ಶಿವಬಸಯ್ಯ ನಡೆಸಿಕೊಟ್ಟರು ಈ ಕಾರ್ಯ ಕ್ರಮದ ಆರಂಭದಲ್ಲಿ ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆಯಾಯಿತು.