ಪ್ರೇಮ ವೈಫಲ್ಯ : ರೈಲಿಗೆ ತಲೆ ಕೊಟ್ಟು ಯುವಕನ ಆತ್ಮಹತ್ಯೆ

ದಾವಣಗೆರೆ, ಆ.10- ಪ್ರೇಮ ವೈಫಲ್ಯ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿ ಇರುವ ರೈಲ್ವೆ ಹಳಿ ಬಳಿ ಇಂದು ಮಧ್ಯಾಹ್ನ ನಡೆದಿದೆ.

ನಗರದ ಹೆಚ್‍ಕೆಆರ್ ವೃತ್ತದ ಬಳಿಯ ಹೊಸ ಲೆನಿನ್ ನಗರದ ಮಹಾಂತೇಶ್ (24) ಮೃತ ಯುವಕ. ಈ ಯುವಕ ಕರೂರು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ. ಗಾರ್ಮೆಂಟ್ಸ್‌ನಲ್ಲಿನ ಯುವತಿಯೊಬ್ಬಳ ಪರಿಚಯವಾಗಿ, ಪ್ರೇಮವಾಗಿತ್ತು. ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿಯೇ ಕಾರಣ ಎಂದು ವಾಟ್ಸಾಪ್ ಸ್ಟೇಟಸ್‍ಗೆ ಹಾಕಿ ಫ್ಯಾಕ್ಟರಿ ಬಳಿಯೇ ಇದ್ದ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.