ಅಣಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷ್‌

ದಾವಣಗೆರೆ, ಆ.8- ತಾಲ್ಲೂಕಿನ ಅಣಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೆಳ್ಳೆಕಟ್ಟೆ ಎಂ.ಆರ್. ಸಂತೋಷ್ ಹಾಗೂ ಉಪಾಧ್ಯಕ್ಷರಾಗಿ ಅಣಜಿಯ ಆರ್.ಹೆಚ್. ಪ್ರಕಾಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಆರ್. ರಮೇಶ್ ಹಾಗೂ ಸಿಇಓ ಎಂ.ಎಸ್. ಬಸವರಾಜಯ್ಯ ತಿಳಿಸಿದ್ದಾರೆ.