ಮಾಯಕೊಂಡ ತಾಲ್ಲೂಕನ್ನಾಗಿಸಲು ಒತ್ತಾಯ

ದಾವಣಗೆರೆ, ಆ. 3 – ಮಾಯಕೊಂಡವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಯಿತು.

ಮಾಯಕೊಂಡ ತಾಲ್ಲೂಕು ಕೇಂದ್ರವಾಗಲು ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ರೈತ ಮುಖಂಡ ಎಂ.ಎಸ್.ಕೆ. ಶಾಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಯವರು ನೀಡುವ ಭರವಸೆಯ ಆಧಾರದಲ್ಲಿ ಮುಂದಿನ  ಹೋರಾಟದ ಸ್ವರೂಪವನ್ನು ನಿರ್ಧಾರದ ಅಧಿಕಾರವನ್ನು ಶಾಸ್ತ್ರಿ ಅವರಿಗೆ  ನೀಡಲಾಯಿತು. 

ಹೆದ್ನೆ, ರಾಂಪುರ, ಹುಚ್ಚವ್ವನಹಳ್ಳಿ, ದಿಂಡದಹಳ್ಳಿ, ಅಣ್ಣಾಪುರ, ದೊಡ್ಡಮಾಗಡಿ, ಕಣ್ಣೂರು, ಕೊಡಗನೂರು, ಪರಶುರಾಂಪುರ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಮುಖಂಡರಾದ ಬಿ.ಸಿ. ಬಸವರಾಜಪ್ಪ, ದಾಸರ ವೆಂಕಟೇಶಪ್ಪ, ಹೊಳೆಯಪ್ಪಳ ಮಲ್ಲಪ್ಪ, ಪೋಸ್ಟ್ ನಾಗರಾಜಪ್ಪ, ಗುಡ್ಡು ಹನುಮಂತಪ್ಪ, ಒಗ್ಗಪ್ಳ ರವಿಕುಮಾರ್‌, ಗೌಡರ ರಾಮಚಂದ್ರಪ್ಪ, ಉಮ್ಮರ್ ಸಾಹೇಬ್, ವೀರಭದ್ರಪ್ಪ, ಪುಟ್ಟರಂಗಸ್ವಾಮಿ, ಬಿ.ಕೆ. ಬೀರಪ್ಪ, ಎಸ್.ಜಿ. ರುದ್ರೇಶ್, ಪಾಲ್ಗೊಂಡಿದ್ದರು.