ಮಲೇಬೆನ್ನೂರಿನಲ್ಲಿ ಡಿ.ಕೆ.ಶಿ.ಗೆ ಅದ್ಧೂರಿ ಸ್ವಾಗತ

ಮಲೇಬೆನ್ನೂರಿನಲ್ಲಿ ಡಿ.ಕೆ.ಶಿ.ಗೆ ಅದ್ಧೂರಿ ಸ್ವಾಗತ

ಮಲೇಬೆನ್ನೂರು, ಜು.15- ಸೂರಗೊಂಡನಕೊಪ್ಪದಲ್ಲಿ ಬಂಜಾರ ಸಮುದಾಯದವರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಮಾರ್ಗ ಮಧ್ಯ ಮಲೇಬೆನ್ನೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿ, ಸನ್ಮಾನಿಸಿ ಬೀಳ್ಕೊಟ್ಟರು.

ಈ ವೇಳೆ ಶಿವಕುಮಾರ್‌ ಅವರು, ಕೋವಿಡ್‌ನಿಂದ ನೊಂದಿರುವ ಕುಟುಂಬದವರ ಸಮೀಕ್ಷೆ ಮಾಡಿ, ಕೈಲಾದಷ್ಟು ನೆರವು ನೀಡಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ ಅವರಿಗೆ ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ಬಿ.ರೋಷನ್, ಎಸ್.ಜಿ.ಪರಮೇಶ್ವರಪ್ಪ, ಆದಾಪುರ ವೀರಭದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸುದೇವಮೂರ್ತಿ, ಮುಖಂಡರಾದ ಬಿ.ವೀರಯ್ಯ, ತಳಸದ ಬಸವರಾಜ್, ಕೆ.ಪಿ.ಗಂಗಾಧರ್, ಎ.ಆರೀಫ್‌ ಅಲಿ, ಎಂ.ಬಿ.ಫೈಜು, ದಾದಾವಲಿ, ಭೋವಿಕುಮಾರ್, ಪಿ.ಹೆಚ್.ಶಿವು, ಪಿ.ಆರ್.ಕುಮಾರ್, ಯುನೂಸ್, ಭೋವಿ ಶಿವು, ಬಾವಿಕಟ್ಟಿ ಕರಿಬಸಪ್ಪ, ಅಕ್ಬರ್ ಅಲಿ, ಫಾಜಿಲ್, ಪೂಜಾರ್ ದೇವರಾಜ್, ಕೊಟ್ರೇಶ್ ನಾಯ್ಕ, ಜಿಗಳಿಯ ಕೆ.ಜಿ.ಬಸವರಾಜ್, ಡಿ.ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.