ಶಾಮನೂರು ಕುಟುಂಬದಿಂದ ಸಿದ್ದವೀರಪ್ಪ ಬಡಾವಣೆಯಲ್ಲಿ ಲಸಿಕಾ ಶಿಬಿರ

ಶಾಮನೂರು ಕುಟುಂಬದಿಂದ  ಸಿದ್ದವೀರಪ್ಪ ಬಡಾವಣೆಯಲ್ಲಿ ಲಸಿಕಾ ಶಿಬಿರ

ದಾವಣಗೆರೆ, ಜು.8- ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು  ನಾಗರಿಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮ ಇಂದೂ ಸಹ ಮುಂದುವರೆದಿದ್ದು, ನಾಗರಿಕರು ಉಚಿತ ಲಸಿಕೆಯನ್ನು ಪಡೆದರು.

ನಗರ ಪಾಲಿಕೆ 42ನೇ ವಾರ್ಡಿನ ಸಿದ್ದವೀರಪ್ಪ ಬಡಾವಣೆಯ ಹಳ್ಳಿ ಮಹಾದೇವಪ್ಪ ಶಾಲೆಯಲ್ಲಿ ನಿನ್ನೆ ನಾಗರಿಕರಿಗೆ ಲಸಿಕೆ ನೀಡಲಾಯಿತು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮನೂರು ಜಿ.ಹೆಚ್. ರಾಮಚಂದ್ರಪ್ಪ ಅವರು ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿ ವರ್ಗದವರು ಲಸಿಕಾ ಶಿಬಿರ ನಡೆಸಿಕೊಟ್ಟರು.

ಮಾಜಿ ನಗರಸಭಾ ಸದಸ್ಯರಾದ ಶ್ರೀಮತಿ ವಿಜಯಾ ಜಿ.ಬಿ.ಲಿಂಗರಾಜ್, ಶಾಮನೂರು ಟಿ.ಬಸವರಾಜ್, ಮಾಜಿ ನಗರ ಪಾಲಿಕೆ ಸದಸ್ಯ
ಜಿ.ಬಿ.ಲಿಂಗರಾಜ್, ಮುಖಂಡರುಗಳಾದ ಕರಿಯಪ್ಪ, ಮಳಲ್ಕೆರೆ ಕೆ.ಎಸ್. ಮಂಜುನಾಥ್, ರವಿ ಧಣಿ, ಬೇತೂರು ನರೇಂದ್ರ, ರಾಜು, ಜಿ.ಎಲ್.ಸುಹಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.