ಶಿಥಿಲಾವಸ್ಥೆಯಲ್ಲಿ ಟ್ಯಾಂಕ್‌ ಆತಂಕದಲ್ಲಿ ಗ್ರಾಮಸ್ಥರು

ಶಿಥಿಲಾವಸ್ಥೆಯಲ್ಲಿ ಟ್ಯಾಂಕ್‌  ಆತಂಕದಲ್ಲಿ ಗ್ರಾಮಸ್ಥರು

ಕೂಡ್ಲಿಗಿ,  ಜು.5- ಕಕ್ಕುಪ್ಪಿ ಗ್ರಾಮದ ಕುಂಬಾರ ಗಲ್ಲಿಯ ಕುಡಿ ಯುವ ನೀರಿನ ಟ್ಯಾಂಕ್  ಶಿಥಿಲಾ ವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿದೆ.

ಮೂವತ್ತು ವರ್ಷ  ಹಳೆಯದಾದ ಈ ಟ್ಯಾಂಕ್ ಅಪಾಯದ ಘಂಟೆ ಬಾರಿಸುತ್ತಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಟ್ಯಾಂಕ್‌ನ ಪಿಲ್ಲರ್‌ಗಳು  ಶಿಥಿಲಾವಸ್ಥೆಯ ಲ್ಲಿದ್ದು, ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ನೀರಿನ ಟ್ಯಾಂಕ್‌ನಡಿ ಆರೇಳು ಮನೆಗಳಿದ್ದು, ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡೇ ದಿನ ದೂಡುತ್ತಿದ್ದಾರೆ.