ಜಗಳೂರು ತಾಲ್ಲೂಕು ಮೀಸಲಾತಿ ಕರಡು ಪ್ರಕಟ

ಹರಪನಹಳ್ಳಿ, ಜು.2- ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ    ಜಿಲ್ಲಾ ಪಂಚಾಯ್ತಿಯ 8 ಹಾಗೂ ತಾಲ್ಲೂಕು ಪಂಚಾಯ್ತಿಯ 21 ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ.

ಜಿಲ್ಲಾ ಪಂಚಾಯ್ತಿ ಅರಸಿಕೇರಿ ಕ್ಷೇತ್ರ ಎಸ್ಟಿ (ಮಹಿಳೆ),  ಚಿಗಟೇರಿ  ಸಾಮಾನ್ಯ, ಮಾಡ್ಲಗೇರಿ  ಎಸ್ಸಿ(ಮಹಿಳೆ), ಮಾಚೀ ಹಳ್ಳಿ ಸಾಮಾನ್ಯ(ಮಹಿಳೆ), ತೆಲಗಿ ಎಸ್ಸಿ, ಹಲುವಾಗಲು ಸಾಮಾನ್ಯ, ಉಚ್ಚಂಗಿದುರ್ಗ ಸಾಮಾನ್ಯ(ಮಹಿಳೆ), ಹಿರೇಮೇಗಳಗೇರಿ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. 

ತಾಲ್ಲೂಕು ಪಂಚಾಯ್ತಿ  ನಿಚ್ಚವ್ವನಹಳ್ಳಿ ಕ್ಷೇತ್ರ – ಎಸ್ಟಿ (ಮಹಿಳೆ), ತೌಡೂರು ಎಸ್ಸಿ, ಅರಸಿಕೇರಿ  ಎಸ್ಟಿ, ಮತ್ತಿಹಳ್ಳಿ ಸಾಮಾನ್ಯ, ಚಿಗಟೇರಿ ಸಾಮಾನ್ಯ (ಮಹಿಳೆ), ಮುತ್ತಿಗೆ ಸಾಮಾನ್ಯ (ಮಹಿಳೆ), ಹಗರಿಗಜಾಪುರ ಸಾಮಾನ್ಯ, ನಂದಿ ಬೇವೂರು ಸಾಮಾನ್ಯ (ಮಹಿಳೆ) ಅಭ್ಯರ್ಥಿಗೆ ಮೀಸಲಾಗಿದೆ.

ಮಾಡ್ಲಗೇರಿ ಕ್ಷೇತ್ರ ಎಸ್ಸಿ (ಮಹಿಳೆ), ಕೆ. ಕಲ್ಲಹಳ್ಳಿ ಎಸ್ಸಿ, ಮಾಚಿಹಳ್ಳಿ ಎಸ್ಟಿ (ಮಹಿಳೆ),  ಹಾರಕನಾಳು ಎಸ್ಸಿ, ತೆಲಿಗಿ ಸಾಮಾನ್ಯ, ಸೇವಾನಗರ ಸಾಮಾನ್ಯ, ಕಡತಿ ಸಾಮಾನ್ಯ, ಕುಂಚೂರು ಸಾಮಾನ್ಯ (ಮಹಿಳೆ), ಹಲುವಾಗಲು ಸಾಮಾನ್ಯ (ಮಹಿಳೆ), ಉಚ್ಚಂಗಿದುರ್ಗ ಎಸ್ಸಿ (ಮಹಿಳೆ), ಅಣಜಿಗೇರಿ  ಎಸ್ಸಿ (ಮಹಿಳೆ), ಕಂಚಿಕೇರಿ  ಸಾಮಾನ್ಯ (ಮಹಿಳೆ), ಹಿರೇಮೇಗಳಗೇರಿ ಕ್ಷೇತ್ರಕ್ಕೆ ಎಸ್ಟಿ ಮೀಸಲು ಇರಿಸಿದೆ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾ ಅಧಿಸೂಚನೆ ಹೊರಡಿಸಿದ್ದಾರೆ.

ಮೀಸಲಾತಿ  ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಜುಲೈ 8ರೊಳಗೆ ಕಾರ್ಯದರ್ಶಿಗಳು,  ರಾಜ್ಯ ಚುನಾವಣಾ ಆಯೋಗ, 1ನೇ ಮಹಡಿ, ಕೆಎಸ್‌ಸಿಎಂಎಫ್‌ ಕಟ್ಟಡ (ಹಿಂಭಾಗ)ನಂ-8 ಕನ್ನಿಂಗ್‌ಹ್ಯಾಂ ರಸ್ತೆ ಬೆಂಗಳೂರು -560052 ಇಲ್ಲಿಗೆ ಸಲ್ಲಿಸಲು ಸೂಚಿಸಲಾಗಿದೆ.

ಈ ಹಿಂದೆ ಹರಪನಹಳ್ಳಿ ತಾಲ್ಲೂಕಿನಲ್ಲಿ 26 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು ಇದ್ದು, ಕ್ಷೇತ್ರಗಳ ಪುನರ್ ವಿಂಗಡಣೆ ನಂತರ 21ಕ್ಕೆ ಇಳಿಸಲಾಗಿದೆ.