ಕೊರೊನಾ ಸಮರದಲ್ಲಿ ಸರ್ಕಾರದಷ್ಟೇ ಜನತೆಯೂ ಜವಾಬ್ದಾರಿ ನಿರ್ವಹಿಸಿದೆ

ಕೊರೊನಾ ಸಮರದಲ್ಲಿ ಸರ್ಕಾರದಷ್ಟೇ ಜನತೆಯೂ ಜವಾಬ್ದಾರಿ ನಿರ್ವಹಿಸಿದೆ

ರಾಣೇಬೆನ್ನೂರು, ಜೂ.29- ಒಂದೆಡೆ ಜಗತ್ತು, ಇನ್ನೊಂದೆಡೆ ಕೊರೊನಾ, ದೊಡ್ಡ ಸಮರವೇ ನಡೆದಿದೆ. ಈ ಸಮರ ಕೊನೆಗಾಣಿಸಲು ಸರ್ಕಾ ರದಷ್ಟೇ ಜವಾಬ್ದಾರಿಯುತವಾಗಿ ಸಂಘ-ಸಂಸ್ಥೆಗಳು, ಸಾರ್ವಜ ನಿಕರು ಹಾಗೂ ಕೆಲವರು ವೈಯಕ್ತಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಸಂಸದ ಶಿವಕುಮಾರ್ ಉದಾಸಿ ಹೇಳಿದರು.

ಇಲ್ಲಿನ ಸ್ನೇಹದೀಪ ಅಂಧ, ಅಂಗವಿಕಲರ ಸಂಸ್ಥೆಯಲ್ಲಿ ಇಂದು ನಡೆದ ಆಹಾರ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಮನವಿ ಕುರಿತು ಮಾತನಾಡಿದ ಉದಾಸಿ,  ಅಂಧರ ಸ್ವಾವಲಂಬಿ ಬದುಕಿಗೆ ಉಪಯುಕ್ತವಾಗುವ ಕೌಶಲ್ಯ ತರಬೇತಿ ಶಾಲೆ ತೆರೆದರೆ ಕೇಂದ್ರದ ನೆರವು ಕೊಡಿಸುವ ಭರವಸೆ ನೀಡಿದರು.

ಸಂಸ್ಥೆಯ ಧರ್ಮದರ್ಶಿಗಳಾದ ಕೆ.ಜಿ. ಮೋಹನ್, ಡಾ. ಪಾಲ್ ಮುದ್ದಾ ಮಾತನಾಡಿ, ಹಿತೈಷಿಗಳ ಹಾಗೂ ದಾನಿಗಳ ಸಹಾಯದಿಂದ ನಡೆಯುತ್ತಿರುವ ಈ ಸಂಸ್ಥೆಗೆ ಸರ್ಕಾರದ ಸಹಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ವಾಯವ್ಯ ಸಾರಿಗೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ ಪಾಟೀಲ, ಎಪಿಎಂಸಿ ನಿರ್ದೇಶಕ ಬಸವರಾಜ ಹುಲ್ಲತ್ತಿ, ಜಿ.ಪಂ. ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.