ಕೂಡ್ಲಿಗಿ : 8 ಮಕ್ಕಳು ಸೇರಿ 100 ಮಂದಿಗೆ ಕೊರೊನಾ

ಕೂಡ್ಲಿಗಿ, ಮೇ 20-  ತಾಲ್ಲೂಕಿನ ಶ್ರೀಕಂಠಾಪುರ ತಾಂಡಾದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಇಲ್ಲಿಯವರೆಗೂ ಎಂಟು ಮಕ್ಕಳು ಸೇರಿದಂತೆ 100 ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ನಾಲ್ಕು ಜನ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಆರೋಗ್ಯ ಇಲಾಖೆಯಿಂದ ಸೋಂಕಿತರಿಗೆ ಮೆಡಿಸನ್ ಕಿಟ್  ನೀಡಲಾಗುತ್ತಿದೆ.  ಎಂಟು ಮಕ್ಕಳು ಮತ್ತು ಉಳಿದ 12 ಜನರಿಗೆ ಇಂದು ಪಾಸಿಟಿವ್ ವರದಿ ಬಂದಿರುವ ಬಗ್ಗೆ ತಿಳಿದಿದೆ. ಇದುವರೆಗೂ ಶ್ರೀಕಂಠಾಪುರ ತಾಂಡಾದಲ್ಲಿ 100 ಸೋಂಕಿತ ಪ್ರಕರಣಗಳಲ್ಲಿ 36 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, 64 ಸಕ್ರಿಯ ಕೇಸುಗಳಿರುವ ಬಗ್ಗೆ   ಮಾಹಿತಿ ಇದೆ.