ನಕ್ಸಲರ ಅಟ್ಟಹಾಸಕ್ಕೆ ಜಿಲ್ಲಾ ಬಿಜೆಪಿ ಖಂಡನೆ

ದಾವಣಗೆರೆ, ಏ. 7- ಛತ್ತಿಸ್‌ಗಢದ ಬಸ್ತಾರ್‌ನಲ್ಲಿ ಅರೆಸೇನಾ ಪಡೆಯ 22 ಯೋಧರ ಹತ್ಯೆ ಮಾಡಿರುವ ನಿಷೇಧಿತ ಮಾವೋವಾದಿ ನಕ್ಸಲರ ಹೇಯ ಕೃತ್ಯವನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ.

ಅಮಾನವೀಯತೆ ಮತ್ತು ಹೇಡಿತನದಿಂದ ಕೂಡಿದ ಕೃತ್ಯವನ್ನು ಎಸಗಿದ ನಕ್ಸಲರು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ವಿರುದ್ಧ ಕಾರ್ಯತತ್ಪರರಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ. 

ಆಗಿಂದಾಗ್ಗೆ ಇಂತಹ ಹಿಂಸಾತ್ಮಕ ಕೃತ್ಯದಲ್ಲಿ ತೊಡಗುವ ದೇಶ ವಿರೋಧಿ ನಕ್ಸಲರ ಸಂಪೂರ್ಣ ನಿರ್ಮೂಲನೆಗೆ ದೇಶದ ಎಲ್ಲರೂ ಪಕ್ಷ ಬೇಧ ಮರೆತು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕಾಗಿದೆ. 

ಶಾಂತಿ, ಅಭಿವೃದ್ಧಿ ಹಾಗೂ ಮಾನವೀಯ ಹಕ್ಕುಗಳ ರಕ್ಷಣೆ ಬಗ್ಗೆ ನಂಬಿಕೆ ಇರುವ ಹಾಗೂ ಪ್ರಾಣ ಮುಡುಪಾಗಿಟ್ಟು ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರ ಈ ಹತ್ಯೆಯನ್ನು ಒಕ್ಕೂರಲಿನಿಂದ ಎಲ್ಲರೂ ಖಂಡಿಸಬೇಕು ಎಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.

Leave a Reply

Your email address will not be published.