ಕೊಟ್ಟೂರು : ಬಾಬೂಜಿ ಜಯಂತಿ ಆಚರಣೆ

ಕೊಟ್ಟೂರು : ಬಾಬೂಜಿ ಜಯಂತಿ ಆಚರಣೆ

ಕೊಟ್ಟೂರು, ಏ.7 – ಬಾಬು ಜಗಜೀವನ್ ರಾಮ್‍ ಇವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸುಧಾರಕರಾಗಿ, ಭಾರತದ ರಕ್ಷಣಾ ಸಚಿವರಾಗಿ, ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಬಾಲ್ಯದಿಂದಲೇ ಸಮಾನತೆಗಾಗಿ ಹೋರಾಡಿದ ಇವರು, ದಲಿತ ಹೋರಾಟದ ಮಹಾ ನಾಯಕ ರಾಗಿದ್ದರು. ಕೃಷಿ ಸಚಿವರಾದ ಸಮಯದಲ್ಲಿ ಹಸಿವು ಮುಕ್ತ ಭಾರತವನ್ನಾಗಿಸಲು ಕೃಷಿಯಲ್ಲಿ ಸಾಕಷ್ಟು ಬದಲಾವಣೆ ತಂದು `ಹಸಿರು ಕ್ರಾಂತಿಯ ಹರಿಕಾರ’ ಎಂದು ಪ್ರಸಿದ್ದಿ ಪಡೆದಿದ್ದರು ಎಂದು ತಹಶೀಲ್ದಾರ್‍ ಜಿ.ಅನಿಲ್‍ಕುಮಾರ್‍ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಆರ್‍.ಅಂಬೇಡ್ಕರ್‍ ಸಂಘದ ಅಧ್ಯಕ್ಷ ಹನುಮಂತಪ್ಪ, ತೆಗ್ಗಿನಕೆರೆ ಕೊಟ್ರೇಶ್‍, ಹೆಚ್‌. ಪರಶುರಾಮ್‍, ಬಿ. ಮಂಜುನಾಥ್‍, ಪ.ಪಂ. ಸದಸ್ಯರಾದ ಟಿ. ಜಗದೀಶ್‍, ಶ್ರೀಮತಿ ವೀಣಾ, ಆರ್‍.ಐ. ಹಾಲಸ್ವಾಮಿ, ರವಿ, ಹನುಮಂತ್‍ ಪೂಜಾರ್‍, ಸಿ.ಮ. ಗುರುಬಸವರಾಜ ಹಾಜರಿದ್ದರು.

Leave a Reply

Your email address will not be published.