ರಾಷ್ಟ್ರೀಯ ಈಜು ಸ್ಪರ್ಧೆ : ರೇವತಿ ನಾಯಕ, ನಕ್ಷತ್ರ ನಾಯಕ ಅವರಿಗೆ ಬಂಗಾರ ಪದಕ

ದಾವಣಗೆರೆ, ಮಾ.27 – ಬೆಂಗಳೂ ರಿನ ಜೀ ಸ್ವಿಮ್‍ ಅಕಾಡೆಮಿಯ ಈಜು ಕೇಂದ್ರದಲ್ಲಿ ಇತ್ತಿಚಿಗೆ ನಡೆದ ರಾಷ್ಟ್ರೀಯ  ಈಜು ಚಾಂಪಿಯನ್‍ಶಿಪ್ ಕ್ರೀಡಾಕೂಟ ದಲ್ಲಿ ನಗರದ ರೇವತಿ ನಾಯಕ್‍ ಸೀನಿ ಯರ್ ವಿಭಾಗ ದಲ್ಲಿ 100 ಮೀ. ಬ್ರೆಸ್ಟ್‍ ಸ್ಟ್ರೋಕ್‍ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 50 ಮೀ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ.

ದಾವಣಗೆರೆ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ, ಬೆಂಗಳೂರಿನ  ಜೀ  ಸ್ವಿಮ್‍ ಅಕಾಡೆಮಿಯಲ್ಲಿ ಈಜು ತರಬೇತಿ ಪಡೆಯುತ್ತಿರುವ ನಕ್ಷತ್ರ ನಾಯಕ್‍ ಜ್ಯೂನಿಯರ್‍ ವಿಭಾಗದಲ್ಲಿ 50 ಮೀ ಫ್ರೀ ಸ್ಟೈಲ್‍ ಪ್ರಥಮ, 50 ಮೀ ಬ್ಯಾಕ್‍ ಸ್ಟ್ರೋಕ್‍ ಪ್ರಥಮ ಹಾಗೂ 100 ಮೀ ಬ್ಯಾಕ್‍ ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನ ಪಡೆದು ಮೂರು ವಿಭಾಗಗಳಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ, ಶಿವಾನಂದ, ರಾಮಲಿಂಗಪ್ಪ, ಸಿದ್ದಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್‍ ಡಿ.ಸೋಜಾ, ಹೇಮಂತ್‍, ತರಬೇತುದಾರ, ಅರ್ಜುನ್‍ ಪ್ರಶಸ್ತಿ ವಿಜೇತ ಶರತ್‍ ಗಾಯಕ್‍ವಾಡ್‍, ಜಾನ್‍ ನಿರ್ಮಲ್‍ ಕ್ರಿಸ್ಟೋಫರ್‍ ಅವರು ಅಭಿನಂದಿಸಿದ್ದಾರೆ.