ಕದಳಿ ಮಹಿಳಾ ವೇದಿಕೆಯಿಂದ ದತ್ತಿ ಉಪನ್ಯಾಸ

ದಾವಣಗೆರೆ, ಮಾ. 26- ಕದಳಿ ಮಹಿಳಾ ವೇದಿಕೆ ನಗರ ಘಟಕದಿಂದ ಶುಕ್ರವಾರ 123ನೇ ಕಮ್ಮಟದಲ್ಲಿ ಡಾ. ಶಶಿಕಲಾ ದತ್ತಿ , ಲಿಂ. ಎಳ ಗೌಡ್ರು ಚನ್ನಬಸಮ್ಮ ಮತ್ತು ಎಳ ಗೌಡ್ರು ಬಸಪ್ಪ ದತ್ತಿ ಮತ್ತು ಲಿಂ.ಗೌರಮ್ಮ ಮತ್ತು ವೀರಭದ್ರಯ್ಯ ಹಂಜಿಗಿ ಮಠ ದತ್ತಿ ಕಾರ್ಯಕ್ರಮ ಹಾಗೂ ಉಪನ್ಯಾಸ ವಾಟ್ಸಾಪ್ ಮೂಲಕ ನಡೆಯಿತು.

ಲಿಂಗಾಯತ ಧರ್ಮ ಮಹಾಸಭಾದ ರಾಜ್ಯ ಸಂಚಾಲಕರೂ, ಬಸವ ತತ್ವ ಪ್ರಸಾರಕರೂ ಆದ ಬಸವನಗೌಡ ಗೌಡರ್  `12ನೇ ಶತಮಾನದಲ್ಲಿ ಶರಣರ ವೈಚಾರಿಕ ನಿಲುವು’ ವಿಷಯ ಕುರಿತು ಉಪನ್ಯಾಸ ನೀಡಿದರು.

ಶಿಕ್ಷಕಿ ನೇತ್ರಾ ಮಂಜುನಾಥ್ `ನನಗೆ ಇಷ್ಟವಾದ ವಚನ’ ವಿಷಯ ಕುರಿತು ಮಾತನಾಡಿದರು. 

ವಿನೋದ ಅಜಗಣ್ಣ ನವರು ಅಧ್ಯಕ್ಷರ ನುಡಿಗಳನ್ನಾಡಿ ವಂದಿಸಿದರು. ಸೌಮ್ಯ ಸತೀಶ್ ಸ್ವಾಗತಿಸಿದರು. ಮಮತಾ ನಾಗರಾಜ್ ದತ್ತಿ ಹಾಗೂ ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು.  ವಸಂತ ಕೆ.ಆರ್.ನಿರೂಪಿಸಿದರು.