ಶೈಕ್ಷಣಿಕ ಸಾಧಕಿ ನಿಧಿಗೆ ಕಲಾಕುಂಚದಿಂದ ಸನ್ಮಾನ

ಶೈಕ್ಷಣಿಕ ಸಾಧಕಿ ನಿಧಿಗೆ ಕಲಾಕುಂಚದಿಂದ ಸನ್ಮಾನ

ದಾವಣಗೆರೆ, ಮಾ. 18- ನಗರದ  ಡಿ.ಸಿ.ಎಂ.ಟೌನ್‍ಶಿಪ್ ನಾಗರಿಕರ ಸಂಘದ ಆಶ್ರಯದಲ್ಲಿ ಡಿ.ಸಿ.ಎಂ.ನ ರಾಜನಹಳ್ಳಿ ಹನುಮಂತಪ್ಪ ಉದ್ಯಾನವನದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಬಿ.ಸಿ.ಎ. ಕಂಪ್ಯೂಟರ್ ಸೈನ್ಸ್‍ನಲ್ಲಿ 2ನೇ ರಾಂಕ್ ಪಡೆದ ಎನ್. ನಿಧಿ ಇವರನ್ನು  ದಾವಣಗೆರೆಯ ಡಿ.ಸಿ.ಎಂ.ಟೌನ್‍ಶಿಪ್  ಕಲಾಕುಂಚ ಶಾಖೆಯ ವತಿಯಿಂದ ಅಧ್ಯಕ್ಷೆ ಶ್ರೀಮತಿ ಶಾರದಮ್ಮ ಶಿವನಪ್ಪ ದಂಪತಿ ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭದಲ್ಲಿ ಎಸ್.ಟಿ.ವೀರೇಶ್, ಡಿ.ಸಿ.ಎಂ.ಟೌನ್‍ಶಿಪ್‍ನ ನಾಗರಿಕ ಸಮಿತಿಯ ಅಧ್ಯಕ್ಷ ಆರ್.ವಿಜಯಕುಮಾರ್, ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಡಿ.ಸಿ.ಎಂ.ಟೌನ್‍ಶಿಪ್‍ನ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ಕೆ.ಹೆಚ್.ಮಂಜನಾಥರೆಡ್ಡಿ, ವಾಮದೇವಪ್ಪ ಈಚಘಟ್ಟ, ಎಸ್.ವಿ.ವಿಶ್ವನಾಥ್, ಸುಮಾ ಮಲ್ಲಿಕಾರ್ಜುನಯ್ಯ, ಸಾಂಬೋಜಿರಾವ್, ಸುರೇಂದ್ರ ಮೊಯಿಲಿ, ಕೆ.ಸಿ.ಬಸವ ರಾಜ್, ಜತೆಯಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ,  ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ಹಾಗೂ ಡಿ.ಸಿ.ಎಂ. ಟೌನ್‍ಶಿಪ್ ಕಲಾಕುಂಚ  ಶಾಖೆಯ ಪದಾಧಿಕಾರಿಗಳಾದ ಡಿ.ಹೆಚ್.ಚನ್ನಬಸಪ್ಪ, ಶಾಂತಕುಮಾರಿ, ವೀಣಾ ಪ್ರಸಾದ್, ಶಕುಂತಲ ನಟೇಶ್ ಉಪಸ್ಥಿತರಿದ್ದರು.

Leave a Reply

Your email address will not be published.