ಉಮಾ ನಾಗರಾಜ್‌ ಅವರಿಗೆ `ವನಿತಾ ಸೇವಾ’ ಪ್ರಶಸ್ತಿ ಪ್ರದಾನ

ದಾವಣಗೆರೆ, ಮಾ.5 – ವನಿತಾ ಸಮಾ ಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ‘ವನಿತಾ ಉತ್ಸವ’ ಸಮಾ ರಂಭವು ಇದೇ ದಿನಾಂಕ 8 ರಂದು ಸಂಜೆ 5.30 ಕ್ಕೆ ನಗರದ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದೆ.   ಮಾಜಿ ಸಚಿವೆ, ಗೌರವಾಧ್ಯಕ್ಷೆ ಡಾ. ಸಿ. ನಾಗಮ್ಮ ಕೇಶವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ಶಶಿಧರ್, ರೇಖಾ ಮಹಾಂತೇಶ್ ಬೀಳಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಉಮಾ ನಾಗರಾಜ್ ಅವರು ‘ವನಿತಾ ಸೇವಾ ಪ್ರಶಸ್ತಿ’ ಸ್ವೀಕರಿಸಲಿದ್ದು, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‍ನ ಛೇರ್ಮನ್ ಚನ್ನಗಿರಿ ವಿರೂಪಾಕ್ಷಪ್ಪ ಅವರು ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅಧ್ಯಕ್ಷೆ ನಾಗರತ್ನ ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published.