ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ

ದಾವಣಗೆರೆ, ಮಾ.2- ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಹಿರಿಯ ಉಪ ನೋಂದಣಾಧಿಕಾರಿಗಳಾದ ಎಲ್.ರಾಮಕೃಷ್ಣ, ಜಿ.ಪ್ರಸನ್ನ ಮನವಿ ಮಾಡಿದ್ದಾರೆ. ಸರ್ವರ್‌ ಸಮಸ್ಯೆಯಿಂದ ತಾತ್ಕಾಲಿಕವಾಗಿ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರ ಸಮಸ್ಯೆ ನಿವಾರಿಸಿ, ಸಾರ್ವಜನಿಕರಿಗೆ ತಿಳಿಸಿದ ನಂತರವೇ ನೋಂದಣಿ ಕಾರ್ಯಕ್ಕೆ ಕಚೇರಿಗೆ ಆಗಮಿಸುವಂತೆ ಅವರು ಹೇಳಿದ್ದಾರೆ.

Leave a Reply

Your email address will not be published.