ಸರ್ಕಾರಿ ನೌಕರರ ಒಕ್ಕೂಟದಿಂದ ಮನವಿ

ಹೊನ್ನಾಳಿ, ಮಾ.2- ತಾಲ್ಲೂಕು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಹೆಚ್‍.ಕೆ ಸಣ್ಣಪ್ಪ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಹಶೀಲ್ದಾರ್‌ ಸುರೇಶ್‍ರವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಅಧ್ಯಕ್ಷರು, 18 ತಿಂಗಳು ಸದಸ್ಯರಿಗೆ ತುಟ್ಟಿಭತ್ಯೆ, ಬಿಡುಗಡೆ, ನಿಶ್ಚಿತ ಪಿಂಚಣಿ ಸ್ಥಾಪನೆ, 5 ವರ್ಷಕೊಮ್ಮೆ ವೇತನ ಆಯೋಗ ರಚನೆ, ದಿನಗೂಲಿ- ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ, ಖಾಲಿ ಹುದ್ದೆಗಳ ನೇಮಕಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ತಿಪ್ಪೇಶಪ್ಪ, ಅರುಣಕುಮಾರ್, ಪಂಚಾಯಿತಿ ನಾಗೇಶ್, ಶಿಕ್ಷಕ ಶಕೀಲ್ ಅಹ್ಮದ್, ಚಂದ್ರಪ್ಪ, ನಾಮದೇವ, ಕೆ.ಎಂ. ಯುವರಾಜ, ಮಂಜುನಾಥ, ಚಂದ್ರಾನಾಯ್ಕ, ನರಸಿಂಹಪ್ಪ, ಆನಂದ, ವೆಂಕಟೇಶ್ ಇದ್ದರು.

Leave a Reply

Your email address will not be published.