ಡಾ. ಎಸ್‍.ಹೆಚ್‍ ಸುಜಿತ್‍ಕುಮಾರ್‍ ಸಂಪನ್ಮೂಲ ವ್ಯಕ್ತಿಯಾಗಿ ನೇಮಕ

ದಾವಣಗೆರೆ, ಮಾ.2 – ಬಾಪೂಜಿ ಎಂಬಿಎ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಎಸ್‍.ಹೆಚ್‍. ಸುಜಿತ್‍ಕುಮಾರ್‍ ಅವರು ಸೆಕ್ಯೂರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಎಸ್‍ಇಬಿಐ) ದಿಂದ ಸಂಪನ್ಮೂಲ ವ್ಯಕ್ತಿಯಾಗಿ  ನೇಮಕಗೊಂಡಿದ್ದಾರೆ.

ಸುಜಿತ್ ಕುಮಾರ್, ಕಳೆದ 10 ವರ್ಷಗಳಿಂದ ವಿವಿಧ ವಲಯಗಳಾದ ಎಕ್ಸಿಕ್ಯೂಟಿವ್ಸ್‍, ಮಧ್ಯಮ ವರ್ಗದವರು, ನಿವೃತ್ತರು, ಗೃಹಿಣಿಯರು ಒಳಗೊಂಡಂತೆ ವಿವಿಧ ಟಾರ್ಗೆಟ್‍ ಗ್ರೂಪ್‍ಗಳಿಗೆ ಉಚಿತವಾಗಿ ಹಣಕಾಸಿನ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ಹೂಡಿಕೆದಾರರ ಹಿತರಕ್ಷಣೆ ಮಾಡುವುದು. ಈ ದೆಸೆಯಲ್ಲಿ ಎಸ್‍ಇಬಿಐ ಯು ಸಂಪನ್ಮೂಲ ವ್ಯಕ್ತಿಗಳಿಂದ ಹಣಕಾಸಿನ ಕಾರ್ಯಾಗಾರ ಮಾಡಿಸುವ ಮುಖಾಂತರ ಹೂಡಿಕೆದಾರರನ್ನು ಜಾಗೃತಗೊಳಿಸುವುದು ಎಸ್‍ಇಬಿಐ ಉದ್ದೇಶವಾಗಿದೆ.

Leave a Reply

Your email address will not be published.