ಜಗಳೂರಿನ ಕಬ್ಬಿಣದ ಅಂಗಡಿಗೆ ಬೆಂಕಿ : ಅಪಾರ ಹಾನಿ

ಜಗಳೂರು, ಮಾ.2- ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಿನ್ನೆ ತಡ ರಾತ್ರಿ ಕಬ್ಬಿಣ ತಯಾರಿಕೆ ಅಂಗಡಿ ಹಾಗೂ ಮಳಿಗೆಯೊಳಗಿನ ಪರಿಕರಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ವಾಗಿದೆ.

ಪಟ್ಟಣದ ಬೈಪಾಸ್ ರಸ್ತೆಯ  ಹಿಂಭಾಗದಲ್ಲಿನ ನಜೀರ್ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಕಬ್ಬಿಣದ ವಸ್ತುಗಳನ್ನು ತಯಾರಿಸಿ ಜೀವನ ಸಾಗಿಸುತ್ತಿದ್ದರು. ನಜೀರ್ ಇದರಿಂದ ಅಪಾರ ನಷ್ಟ ಅನುಭವಿಸಿದ್ದು ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Leave a Reply

Your email address will not be published.