ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕುರಿ, ಮೇಕೆಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಆರೋಪಿ ಸೇರಿ ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಅಕ್ಕಪಕ್ಕದ ಮನೆಗಳ ಹೊರಗೆ ಚಿಲಕ ಹಾಕಿ ಮನೆಗಳ್ಳತನ
ಅಕ್ಕಪಕ್ಕದ ಮನೆಗಳ ಹೊರಗೆ ಚಿಲಕ ಹಾಕಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ
ದಾವಣಗೆರೆ ಸರ್ವಾಂಗೀಣ ಬೆಳವಣಿಗೆಯನ್ನು ಕಾಣುವಂತಾಗಲು ರಾಜನಹಳ್ಳಿ ವಂಶಸ್ಥರ ಕೊಡುಗೆ ಅಪಾರವಾಗಿದ್ದು, ದಾನಿಗಳಾದ ರಾಜನಹಳ್ಳಿ ಹನುಮಂತಪ್ಪನವರ ಹೆಸರನ್ನು ನೂತನವಾಗಿ ನಿರ್ಮಾಣವಾಗಿ ರುವ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.
ವೃದ್ಧಾಶ್ರಮದ ವೃದ್ದರಿಗೆ ಬಟ್ಟೆ, ಊಟ ವಿತರಣೆ
ಹರಿಹರ ನಗರದ ಎಂ.ಬಿ. ಗುರುದೇವ ಅವರ 2ನೇ ವರ್ಷದ ಪುಣ್ಯತಿಥಿ ನಿಮಿತ್ತವಾಗಿ ದಾವಣಗೆರೆ ನಗರದ ಲಲಿತ ವೃದ್ಧಾಶ್ರಮದ ವೃದ್ದರಿಗೆ ಬಟ್ಟೆ ಹಾಗೂ ಊಟದ ವ್ಯವಸ್ಥೆಯನ್ನು ಅವರ ಕುಟುಂಬದ ಸದಸ್ಯರು ಮಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏಪ್ರಿಲ್ 2 ರಂದು ಚಾಲನೆ
ಸ್ವಾತಂತ್ರ್ಯೋತ್ಸ ವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 2 ರಂದು ಸ್ವಾತಂತ್ರ್ಯದ ಸಂದೇಶ ಸಾರುವ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಅಮೃತ ಮಹೋ ತ್ಸವಕ್ಕೆ ಚಾಲನೆ ನೀಡಲಾಗುವುದು
ಪರಿಶ್ರಮಕ್ಕೆ ಒಳಗಾದವರಿಗೆ ಯಾವ ರೋಗವೂ ಬರುವುದಿಲ್ಲ
ಚಿತ್ರದುರ್ಗ : ಕೊರೊನಾಕ್ಕಿಂತ ಮೊದಲು ಜಗತ್ತು ಹಣ, ಅಧಿಕಾರ, ಆಸ್ತಿಯ ಜೊತೆ ಸಾಗುತ್ತಿತ್ತು. ಕೊರೊನಾ ನಂತರ ಯಾವುದೂ ಶಾಶ್ವತ ಅಲ್ಲ, ಆರೋಗ್ಯವೇ ಭಾಗ್ಯ ಎನ್ನುವ ಮಟ್ಟಕ್ಕೆ ಬಂದಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಕುಂಬಳೂರಿನಲ್ಲಿ ಮುಳ್ಳೋತ್ಸವ: ಗಮನ ಸೆಳೆದ ತರಕಾರಿ ಅಲಂಕಾರ
ಮಲೇಬೆನ್ನೂರು : ಕುಂಬಳೂರು ಗ್ರಾಮದಲ್ಲಿ ಶ್ರೀ ಹನುಮಂತ ದೇವರ ರಥೋತ್ಸವದ ಅಂಗವಾಗಿ ಮಂಗಳವಾರ ಸಾಯಂಕಾಲ ಮುಳ್ಳೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ದುರ್ಗಾಶಕ್ತಿ ಮಹಿಳಾ ಮಂಡಳಿಯಿಂದ ಕಣ್ಣಿನ ತಪಾಸಣಾ ಶಿಬಿರ
ಇತ್ತೀಚೆಗೆ 37ನೇ ವಾರ್ಡಿನಲ್ಲಿ ದುರ್ಗಾಶಕ್ತಿ ಮಹಿಳಾ ಮಂಡಳಿ ಹಾಗೂ ವಿಷನ್ ರೈಜ್ ಆಪ್ಟಿಕಲ್ಸ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಡಾಂಗೆ ಪಾರ್ಕ್ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದ ವಿಸ್ತರಣೆ ಅತ್ಯವಶ್ಯ
ದಾವಣಗೆರೆ ರೈಲು ನಿಲ್ದಾಣದ ವರಮಾನವು, ಮೈಸೂರು ಡಿವಿಜನ್ನಲ್ಲಿ ಮೈಸೂರಿನ ನಂತರ 2ನೇ ಸ್ಥಾನದಲ್ಲಿದೆ.
ಔದ್ಯೋಗಿಕ ಆಸಕ್ತಿಗೆ ವೇದಿಕೆ ನಿರ್ಮಾಣ
ಹೊನ್ನಾಳಿ ಪಟ್ಟಣದಲ್ಲಿ ಉದ್ಯಮ ಸ್ಥಾಪನೆಗೆ ಯತ್ನಿಸುವ ಮೂಲಕ ಗ್ರಾಮೀಣ ಯುಜನತೆಯ ಔದ್ಯೋಗಿಕ ಆಸಕ್ತಿಗೆ ವೇದಿಕೆ ನಿರ್ಮಾಣ ಮಾಡಲು ಹೊರಟಿರುವ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ನಡೆ ಶ್ಲಾಘನೀಯ ಎಂದು ಶಿವಮೊಗ್ಗ ಕೈಗಾರಿಕಾ ವಾಣಿಜ್ಯ ಛೇಂಬರ್ ಅಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.