ಲಂಚ ಸ್ವೀಕರಿಸಿದ ಆರೋಪ ಗ್ರಾಮ ಲೆಕ್ಕಾಧಿಕಾರಿ-ಸಹಾಯಕನಿಗೆ ಶಿಕ್ಷೆ

ದಾವಣಗೆರೆ, ಫೆ.22- ಲಂಚ ಸ್ವೀಕರಿಸಿದ ಆರೋಪದಡಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಸಹಾಯಕನಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ದಂಡ ಸಹಿತ ಶಿಕ್ಷೆ ವಿಧಿಸಿದೆ.

ನವಲೇಹಾಳ್ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ ಮತ್ತು ಸಹಾಯಕ ಜಗದೀಶ್‌ ಶಿಕ್ಷೆಗೊಳಗಾದವರು.

ಚನ್ನಗಿರಿ ತಾಲ್ಲೂಕು ನವಿಲೇಹಾಳ್ ಗ್ರಾಮದ ಗೋವರ್ಧನ ಗಿರಿ ಶ್ಯಾಮ್ ಎಂಬಾತ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ತಿಪ್ಪೇಸ್ವಾಮಿ ಮತ್ತು ಜಗದೀಶ್‌ ಸಿಕ್ಕಿ ಬಿದ್ದಿದ್ದರು. 

ಈ ಸಂಬಂಧ ಲಂಚ ಸ್ವೀಕಾರ ಆರೋಪದಡಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಸ್ವಾಮಿಗೆ 2 ವರ್ಷ ಶಿಕ್ಷೆ ಮತ್ತು 20 ಸಾವಿರ ದಂಡ ಮತ್ತು ಸಹಾಯಕ ಜಗದೀಶ್‌ಗೆ 1 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಕೆ.ಬಿ. ಗೀತಾ ಆದೇಶಿಸಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕ ಪಿ.ವೈ. ಹಾದಿಮನಿ ವಾದ ಮಂಡಿಸಿದ್ದರು.

Leave a Reply

Your email address will not be published.