ಕೂಡ್ಲಿಗಿ : 10 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ

ಕೂಡ್ಲಿಗಿ : 10 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ

ಕೂಡ್ಲಿಗಿ, ಫೆ.22- ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಹೀಗಾಗಿಯೇ ತಾಲ್ಲೂಕು ಆಡಳಿತವನ್ನು ಸಕ್ರಿಯಗೊಳಿಸುವ ಮೂಲಕ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು. 

ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ 10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡುತ್ತಿದ್ದರು. 

ಬಳ್ಳಾರಿ ಜಿಲ್ಲೆಯಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪ ಡಿಸಿಕೊಳ್ಳುವಲ್ಲಿ ಕೂಡ್ಲಿಗಿ ತಾಲ್ಲೂಕು ಮುಂಚೂಣಿಯಲ್ಲಿದ್ದು, ಹಳ್ಳಿಗಳ ಜನತೆಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ. ಹಾಗಾಗಿ ಆಯಾ ಇಲಾಖೆಯ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಜನತೆಗೆ ಕೆಲಸ ನೀಡುವುದರ ಮೂಲಕ ತಾಲ್ಲೂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಅಧಿಕಾರಿಗ ಳಿಗೆ ಕಿವಿಮಾತು ಹೇಳಿದರು. 

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಊರಮ್ಮ, ಇಒ ಬಸಣ್ಣ, ಪ.ಪಂ.ಮುಖ್ಯಾಧಿಕಾರಿ ಫಕೃದ್ದೀನ್, ಭೂ ಸೇನಾ ನಿಗಮದ ಅಧಿಕಾರಿ ಶಂಕರನಾಯ್ಕ, ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ.ತಿಪ್ಪೇ ಸ್ವಾಮಿ, ಕೆ.ಹೆಚ್.ವೀರನಗೌಡ್ರು, ಬಿ.ಭೀಮೇಶ್, ಎಸ್.ದುರುಗೇಶ್, ಮಂಜು ನಾಥ ನಾಯಕ, ಜಯ ಮ್ಮರ ರಾಘ ವೇಂದ್ರ ತಾ.ಪಂ.ಸದಸ್ಯ ಹುಡೇಂ ಪಾಪನಾಯಕ, ಮಂಡಲ ಬಿಜೆಪಿ ಅಧ್ಯಕ್ಷ ಚನ್ನಪ್ಪ, ಪ.ಪಂ.ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಬಾಸುನಾಯ್ಕ, ಸಚಿನ್ ಕುಮಾರ್, ಚಂದ್ರು, ಕೆ.ಈಶಪ್ಪ, ಸಿರಿಬಿ ಮಂಜುನಾಥ, ಸಯ್ಯದ್ ಶುಕುರ್ ಮತ್ತಿತರರು ಹಾಜರಿದ್ದರು.   

ಶಾಸಕರಿಂದ ವಿವಿಧೆಡೆ ಭೂಮಿಪೂಜೆ :  ಕೂಡ್ಲಿಗಿಯಲ್ಲಿ ಬಸ್ ನಿಲ್ದಾಣದ ಭೂಮಿಪೂಜೆಯ ನಂತರ ತಾಲ್ಲೂಕಿನ ಬಡೇಲಡಕು ಗ್ರಾಮದ ಪರಿಶಿಷ್ಠ ಜಾತಿಯ ಕಾಲೋನಿಯಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. 

ನಂತರ ಭೈರದೇವರಗುಡ್ಡ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದರು. ನಂತರ ಉಜ್ಜಿನಿ ಗ್ರಾಮಕ್ಕೆ ತೆರಳಿ 22 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದರು. 

ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ 1 ಕೋಟಿ ವೆಚ್ಚದಲ್ಲಿ 2 ಶುಶ್ರೂಕಿಯರ ವಸತಿ ಗೃಹಗಳು,  2ಡಿ ಗ್ರೂಪ್ ನೌಕರರ ವಸತಿ ಗೃಹಗಳು, ಹೆಚ್ಚು ವರಿಯಾಗಿ 2 ವಾರ್ಡ್‌ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. 

Leave a Reply

Your email address will not be published.