ಡಿಕ್ಕಿ ಸಂಭವಿಸಿ, ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು-ಲಾರಿ

ಡಿಕ್ಕಿ ಸಂಭವಿಸಿ, ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು-ಲಾರಿ

ದಾವಣಗೆರೆ, ಫೆ.20- ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ನಡು ರಸ್ತೆಯಲ್ಲೇ ಟಿಪ್ಪರ್ ಲಾರಿ-ಕಾರು ಬೆಂಕಿ ಹೊತ್ತಿ ಉರಿದಿರುವ ಘಟನೆ ನಗರದ ಹೊರವಲಯದ ವಿದ್ಯಾನಗರದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇಂದು ನಡೆದಿದೆ.

ಯೂ ಟರ್ನ್ ತೆಗೆದುಕೊಳ್ಳುವಾಗ ಎದುರಿಗೆ ಬಂದ ಬೆಂಗಳೂರಿನಿಂದ ಹುಬ್ಬಳ್ಳಿ ಕಡೇ ಹೊರಟ್ಟಿದ್ದ ಕಾರು ಲಾರಿಯ ಡಿಸೇಲ್ ಟ್ಯಾಂಕ್ ಗೆ ಡಿಕ್ಕಿ ಹೊಡೆದಾಗ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹತ್ತುತ್ತಿದ್ದಂತೆ ಲಾರಿ ಹಾಗೂ ಕಾರಿನಲ್ಲಿದ್ದವರು ಹೊರಗೆ ಬಂದಿದ್ದಾರೆ. ಕಾರಿನಲ್ಲಿ ಇದ್ದ  ಶ್ರೀರಾಮ್ ಎಂಬುವರು ಗಾಯಗೊಂಡಿದ್ದಾರೆ. ಸ್ಥಳೀಯರಿಂದ ಕಾರಿನಲ್ಲಿದ್ದವರ ರಕ್ಷಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತ ಗೊಂಡಿತು. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮಾ ಮತ್ತು ಸಿಬ್ಬಂದಿಗಳ ತಂಡವು ಬೆಂಕಿ ನಿಯಂತ್ರಿಸುವಲ್ಲಿ ಹರಸಾಹಸಪಟ್ಟಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.