38ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

38ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ದಾವಣಗೆರೆ, ಫೆ.17 – ನಗರದ 38ನೇ ವಾರ್ಡಿನ ಎಂ.ಸಿ.ಸಿ. `ಬಿ’ ಬ್ಲಾಕ್‌ 4ನೇ ಮುಖ್ಯರಸ್ತೆ, 6ನೇ ತಿರುವಿನ ರಸ್ತೆಯನ್ನು ಸಿಮೆಂಟ್‍ ರಸ್ತೆಯನ್ನಾಗಿ ಮಾಡುವ ಕಾಮಗಾರಿಯನ್ನು ಇಂದು ಆರಂಭಿಸಲಾಯಿತು. 38ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್‍. ಮಂಜುನಾಥ್ ಗಡಿಗುಡಾಳ್ ಪೂಜೆ ಸಲ್ಲಿಸುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. 

ಎಂ.ಸಿ.ಸಿ. `ಬಿ’ ಬ್ಲಾಕ್‍ನ ನಾಗರಿಕರೂ ಆಗಿರುವ ಗಣ್ಯರುಗಳಾದ ಗಡಿಗುಡಾಳ್ ಪರಮೇಶ್ವರ ಗೌಡ್ರು, ಪರಶುರಾಮಪ್ಪ, ಗುರುಮೂರ್ತಿ, ಡಾ|| ವಿಶ್ವನಾಥ್‌, ಶ್ರೀಮತಿ ಯಶೋಧ ವಿಶ್ವನಾಥ್, ರೇವಣಸಿದ್ದಪ್ಪ, ಮುಂಡಾಸದ ರವಿ, ಪ್ರಕಾಶ್ ಕಬ್ಬೂರು, ಕಂಟ್ರ್ಯಾಕ್ಟರ್‌ ಡಿ.ಎಸ್‍. ಚಂದ್ರಶೇಖರಪ್ಪ, ಎಇಇ ನಟರಾಜ್‍, ಎಇಇ ಪ್ರದೀಪ್, ಎಇ ಮಧುಸೂದನ್, ಅಜಯ್, ನಿಖಿಲ್ ಎಂ., ನೀಲಕಂಠಪ್ಪ, ಶೌಕತ್ ಅಲಿ, ಕೆ.ಬಿ ಮಂಜುನಾಥ್, ನಾರಾಯಣ್‍ರಾವ್ ಬಿ.ಆರ್., ಪ್ರಭುಸ್ವಾಮಿ, ಸುರೇಂದ್ರನಾಥ್‍ ಟಿ.ಎನ್., ಆಡಿಟರ್‍ ಮಂಜುನಾಥ್, ಕೆ.ಎಸ್‍.ಶಾಮಸುಂದರ್‍, ಅಂಗಡಿ ಉಸ್ಮಾನ್ ಸಾಹೇಬ್, ಕೆ. ಬಸವನಗೌಡ್ರು, ಜಿ.ಎಸ್‍.ಸತೀಶ್, ಹಾಲೇಶಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.