ಮಹಿಳಾ ಕ್ರೀಡಾಕೂಟದಲ್ಲಿ ಎ.ವಿ.ಕೆ.ಗೆ ಪ್ರಥಮ ಬಹುಮಾನ

ಮಹಿಳಾ ಕ್ರೀಡಾಕೂಟದಲ್ಲಿ  ಎ.ವಿ.ಕೆ.ಗೆ ಪ್ರಥಮ ಬಹುಮಾನ

ದಾವಣಗೆರೆ, ಫೆ. 17- ದಾವಣಗೆರೆ ವಿಶ್ವವಿದ್ಯಾಲಯದ ದಾವಣಗೆರೆ ವಲಯ ಹಾಗೂ ಅಂತರ್ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಕ್ರೀಡೆಯನ್ನು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚಿತ್ರದುರ್ಗ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕ್ರೀಡೆಯಲ್ಲಿ ನಗರದ ಎ.ವಿ.ಕೆ. ಕಾಲೇಜು ವಿದ್ಯಾರ್ಥಿಗಳಾದ ಹೆಚ್.ಜಿ. ಅಂಜನಾ, ಜಿ.ಇ. ಸಹನಾ, ಜಿ.ಎಸ್. ಪೂಜಾ, ಡಿ.ಎಲ್. ಪೂಜಾ ಹಾಗೂ ವಿ. ಸಹನಾ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್, ಕ್ರೀಡಾ ವಿಭಾಗದ ಸಂಯೋಜಕ ಆರ್. ಚನ್ನಬಸವನಗೌಡ, ಕ್ರೀಡಾ ತರಬೇತುದಾರರಾದ ಎಸ್. ಅಂಜಲಿ, ಸಿ.ಎಸ್. ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.