Day: February 18, 2021

Home 2021 February 18 (Thursday)
Post

ಕೆರೆ ಸಂರಕ್ಷಣೆ ದೂರು ನಿರ್ವಹಣಾ ಕೇಂದ್ರ ಸ್ಥಾಪನೆ

ರಿಟ್ ಅರ್ಜಿಗಳ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನಿನ್ನೆ ನೀಡಿರುವ ಆದೇಶದಂತೆ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೆರೆಗಳ ಪ್ರದೇಶಗಳಲ್ಲಿ ಅನಧಿಕೃತ ಒತ್ತುವರಿ, ಕೆರೆ ಮಾಲಿನ್ಯ, ಕೆರೆ ಸಂರಕ್ಷಣೆ ಮತ್ತು ಇನ್ನಿತರೆ ಕೆರೆ ಸಂರಕ್ಷಣೆ ಕುರಿತಾಗಿ ದೂರುಗಳನ್ನು ಸ್ವೀಕರಿಸಲು ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

Post

ರಸ್ತೆಗಳಿಗೆ ಹೆಸರುಗಳನ್ನು ಇಡಲು ನಗರ ಪಾಲಿಕೆ ಅನುಮತಿ ಕಡ್ಡಾಯ

ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳ ರಸ್ತೆಗಳಿಗೆ ಹೆಸರುಗಳನ್ನು ಬರೆಸುವುದು, ಬೋರ್ಡ್‌ಗಳನ್ನು ಹಾಕುವುದು ಕಂಡುಬಂದಿದ್ದು, ರಸ್ತೆಗಳಿಗೆ ಹೆಸರಿಡುವುದಕ್ಕೆ ಮಹಾನಗರ ಪಾಲಿಕೆ ಅನುಮತಿ ಕಡ್ಡಾಯವಾಗಿ ಪಡೆಯಬೇಕು.

38ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
Post

38ನೇ ವಾರ್ಡಿನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

38ನೇ ವಾರ್ಡಿನ ಎಂ.ಸಿ.ಸಿ. `ಬಿ' ಬ್ಲಾಕ್‌ 4ನೇ ಮುಖ್ಯರಸ್ತೆ, 6ನೇ ತಿರುವಿನ ರಸ್ತೆಯನ್ನು ಸಿಮೆಂಟ್‍ ರಸ್ತೆಯನ್ನಾಗಿ ಮಾಡುವ ಕಾಮಗಾರಿಯನ್ನು ಇಂದು ಆರಂಭಿಸಲಾಯಿತು. 38ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್‍. ಮಂಜುನಾಥ್ ಗಡಿಗುಡಾಳ್ ಪೂಜೆ ಸಲ್ಲಿಸುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. 

Post

ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್‌ ಅವರಿಗೆ `ವರ್ಷದ ವ್ಯಕ್ತಿ-2020′ ಪ್ರಶಸ್ತಿ

ಜಿಲ್ಲೆ ಸಮಾಚಾರ ದಿನಪತ್ರಿಕಾ ಬಳಗದ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕೊಡಮಾಡುವ `ವರ್ಷದ ವ್ಯಕ್ತಿ-2020' ಪ್ರಶಸ್ತಿಗೆ ಈ ಬಾರಿ ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

Post

ಕೂಡ್ಲಿಗಿಯಲ್ಲಿ ಕಾರ್ಮಿಕನ ಸಾವು

ಕೂಡ್ಲಿಗಿ ತಾಲ್ಲೂಕಿನ ಚೌಡಾಪುರ ಕೆರೆಯಲ್ಲಿ ಬುಧವಾರ ನರೇಗಾ ಕಾಮಗಾರಿಯಲ್ಲಿ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕ ಬಾರಿ ಕರ ಪಂಪಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಕೆಚ್ಚೇನಹಳ್ಳಿ ಸಿದ್ದೇಶ್
Post

ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಕೆಚ್ಚೇನಹಳ್ಳಿ ಸಿದ್ದೇಶ್

ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕೆಚ್ಚೇನಹಳ್ಳಿಯ ಕೆ.ಬಿ.ಸಿದ್ದೇಶ್ ಅವಿರೋಧವಾಗಿ ಆಯ್ಕೆಯಾದರು.

ಮಹಿಳಾ ಕ್ರೀಡಾಕೂಟದಲ್ಲಿ  ಎ.ವಿ.ಕೆ.ಗೆ ಪ್ರಥಮ ಬಹುಮಾನ
Post

ಮಹಿಳಾ ಕ್ರೀಡಾಕೂಟದಲ್ಲಿ ಎ.ವಿ.ಕೆ.ಗೆ ಪ್ರಥಮ ಬಹುಮಾನ

ದಾವಣಗೆರೆ ವಿಶ್ವವಿದ್ಯಾಲಯದ ದಾವಣಗೆರೆ ವಲಯ ಹಾಗೂ ಅಂತರ್ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಕ್ರೀಡೆಯನ್ನು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚಿತ್ರದುರ್ಗ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕ್ರೈಸ್ತ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ
Post

ಕ್ರೈಸ್ತ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

ಕ್ರೈಸ್ತ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ವತಿಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು ಎಂದು ರಾಜ್ಯ ಅಧ್ಯಕ್ಷ ಬಿ. ರಾಜಶೇಖರ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.