ಶಾಮನೂರು ಆಂಜನೇಯ ದರ್ಶನ ಪಡೆದ ಸರ್ಜಾ

ದಾವಣಗೆರೆ, ಫೆ.15- ತಾವು ನಟಿಸಿರುವ ಬಹು ನಿರೀಕ್ಷಿತ ಪೊಗರು ಸಿನಿಮಾದ ಆಡಿಯೋ ರಿಲೀಸ್‌ಗಾಗಿ ಬೆಣ್ಣೆನಗರಿಗೆ ಇಂದು ನಟ ಧ್ರುವ ಸರ್ಜಾ ಆಗಮಿಸಿದ್ದರು. 

ನಗರದ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಆಡಿಯೋ ರಿಲೀಸ್ ಗೂ ಮುನ್ನ ಆಂಜನೇಯನ ಪರಮ ಭಕ್ತರಾಗಿರುವ ಧ್ರುವ ಸರ್ಜಾ ಶಾಮನೂರಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪೊಗರು ಸಿನಿಮಾದ ಯಶಸ್ಸಿಗೆ ಪ್ರಾರ್ಥಿಸಿದರು.

ಅಭಿಮಾನಿಗಳ ದಂಡು: ನೆಚ್ಚಿನ ನಟನ ನೋಡಲು ದೇವಸ್ಥಾನದ ಮುಂದೆ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಆಡಿಯೋ ರಿಲೀಸ್ ವಿಚಾರ ತಿಳಿದಿದ್ದ ಅಭಿಮಾನಿಗಳು ಧ್ರುವ ಸರ್ಜಾ ಅವರನ್ನು ನೋಡಲು ಕಾತುರದಿಂದ ಕಾದಿದ್ದರು. ಶಾಮನೂರಿನ ಆಂಜನೇಯ ದೇವಸ್ಥಾನಕ್ಕೆ ಬಂದಿರುವ ವಿಚಾರ ತಿಳಿದು ಅಭಿಮಾನಿ ಗಳು ಮುಗಿಬಿದ್ದಿದ್ದರು. ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ದೇವಸ್ಥಾನದ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ನೆಚ್ಚಿನ ನಟನ ಕಣ್ತುಂಬಿಕೊಳ್ಳಲು ನಟನ್ನು ಬಳಿ ಹೋಗಲು ಮುಂದಾದಾಗ ನೂಕು ನುಗ್ಗಲು ಉಂ ಟಾಗಿತ್ತು. ಸಿಳ್ಳೆ ಕೇಕೆ ಹೊಡೆಯುತ್ತಾ ಧ್ರುವ ಸರ್ಜಾ ಸುತ್ತ ಅಭಿಮಾನಿಗಳು ಸೇರಿದ್ದರು. ಧ್ರುವ ಸರ್ಜಾಗೆ ದೇವಸ್ಥಾನ ದಿಂದ ಹೊರ ಬರಲು ಜಾಗ ಬಿಡದೆ ಮುಗಿ ಬಿದ್ದರು.

Leave a Reply

Your email address will not be published.