ಮಕ್ಕಳ ಸ್ನೇಹಿ ಅಭಿಯಾನ ಎಲ್ಲಾ ಶಾಲೆಗಳಲ್ಲಿ ಅಳವಡಿಸಬೇಕು

ಮಕ್ಕಳ ಸ್ನೇಹಿ ಅಭಿಯಾನ ಎಲ್ಲಾ ಶಾಲೆಗಳಲ್ಲಿ ಅಳವಡಿಸಬೇಕು

ಹರಪನಹಳ್ಳಿ ತಾ.ಪಂ ಸದಸ್ಯ ಎಂ.ಪ್ರಕಾಶ್‍

ಹರಪನಹಳ್ಳಿ, ಫೆ.14 – ಗ್ರಾಮ ಪಂಚಾಯತಿ ಮಕ್ಕಳ ಸ್ನೇಹಿ ಅಭಿಯಾನ ಕಾರ್ಯಕ್ರಮವನ್ನು  ಎಲ್ಲಾ ಶಾಲೆಗಳಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಪ್ರಕಾಶ್‍ ಹೇಳಿದರು

ತಾಲ್ಲೂಕಿನ  ಕಡಬಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ದಡಿ ಸಮುದಾಯ ಆಧಾರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ಪೋಷಕರು ಶಾಲೆಯನ್ನು ಅರ್ಧಕ್ಕೆ ಬಿಡಿಸಿ ಹೊಲಗಳಲ್ಲಿ ಕೆಲಸ ಮಾಡಿಸಿ ಬಾಲ ಕಾರ್ಮಿಕ ರನ್ನಾಗಿಸಿ ಬಾಲ್ಯ ವಿವಾಹ ಮಾಡುವುದು ತಪ್ಪು. ಏನೂ ತಿಳಿಯದ ಮಗುವನ್ನು ಸಂಕಷ್ಟಕ್ಕೆ ದೂಡುತ್ತಾರೆ. ಕಾನೂನು ಮತ್ತು ಕಾಯ್ದೆ ಬಗ್ಗೆ ಪೋಷಕರಿಗೆ ತಿಳಿವಳಿಕೆ ನೀಡಬೇಕು ಮತ್ತು ಓದು ಬೆಳಕು ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು. 

ಎಸ್.ಡಿ.ಎಂ.ಸಿ ಅಧ್ಯಕ್ಷ  ವೀರಣ್ಣ ಅಧ್ಯಕ್ಷತೆ ವಹಿಸಿದ್ದರು, ಶಾಲೆಯ ಮುಖ್ಯ ಶಿಕ್ಷಕ ಎಸ್. ಬಸವರಾಜ, ಸಿ.ಆರ್.ಪಿ. ಅಬ್ದುಲ್ ಸಲಾಂ, ಗ್ರಾ.ಪಂ  ಅಧ್ಯಕ್ಷರಾದ ಅನುಷ ಮಂಜುನಾಥ, ಉಪಾಧ್ಯಕ್ಷರಾದ ಬಿ. ಮಂಜಮ್ಮ,  ಸದಸ್ಯರುಗಳಾದ ಎಂ.ಹನುಮಂತಪ್ಪ,
ಬಿ.ಶೈಲಜಾ, ಸಂಪ ನ್ಮೂಲ ವ್ಯಕ್ತಿಗಳಾದ
ಕೆ.ಮೂಗಪ್ಪ, ಜಿ.ಲಿಂಗರಾಜ್, ರತ್ನಮ್ಮ. ಮುಖಂಡರಾದ  ಬಿ.ನಾಗರಾಜ, ಬಿ.ಸಿದ್ದೇಶ, ಹೆಚ್.ಶೃತಿ ಭಾಗವಹಿಸಿ ದ್ದರು. ಕೊನೆಯಲ್ಲಿ ಮಕ್ಕಳಿಂದ ಜಾಗೃತಿ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರವನ್ನು ಸಾಸ್ವಿಹಳ್ಳಿಯ ಸಂಗಮೇಶ್ವರ ಕಲಾ ಸಂಘ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Leave a Reply

Your email address will not be published.