ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ

ದಾವಣಗೆರೆ, ಫೆ.14- ಕಣಿವೆ ರಾಜ್ಯದ ಪುಲ್ವಾಮಾ ಬಳಿ 2019ರ ಫೆಬ್ರವರಿ14ರಂದು ಉಗ್ರರ ದಾಳಿಗೆ 40 ಮಂದಿ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿ, 39 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಆ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಗರದ ಹೊಂಡದ ವೃತ್ತದಲ್ಲಿ ಹಿಂದೂ ಪರ ಸಂಘಟನೆಗಳಿಂದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕುವುದರ ಮೂಲಕ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಹಿಂದೂ ಜಾಗರಣ ವೇದಿಕೆಯ ರಾಕೇಶ್ ಜಾಧವ್, ಕೆ.ಆರ್. ಮಲ್ಲಿಕಾರ್ಜುನ್, ತಿಲಕ್, ಮಂಜುನಾಥ್, ಸೋಮಶೇಖರ ರೆಡ್ಡಿ, ಮಂಜುನಾಥ್ ನಿಬ್ಬೂರು, ನವೀನ್‍ಕುಮಾರ್, ರಾಕೇಶ್ ಬಜರಂಗಿ, ಪ್ರವೀಣ್ ಜಾಧವ್, ರಮೇಶ್ ಮತ್ತಿತರರಿದ್ದರು. 

Leave a Reply

Your email address will not be published.