ದಾವಣಗೆರೆ : 2019ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಇಲ್ಲಿನ ದಕ್ಷಿಣ ವೃತ್ತ ಸಿಪಿಐ ಹೆಚ್. ಗುರುಬಸವರಾಜ ಭಾಜನರಾಗಿದ್ದು, ಎಸ್ಪಿ ಹನುಮಂತರಾಯ ಅವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಂದು ಅಭಿನಂದಿಸಿದರು.
ಕಂದನಕೋವಿ ಗ್ರಾ.ಪಂ. ಅಧ್ಯಕ್ಷರಾಗಿ ಗಾಯತ್ರಿ, ಉಪಾಧ್ಯಕ್ಷರಾಗಿ ಸಂಗನಬಸಪ್ಪ
ದಾವಣಗೆರೆ : ಕಂದನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ಮುನಿಯನಾಯ್ಕ, ಉಪಾಧ್ಯಕ್ಷರಾಗಿ ಸಂಗನಬಸಪ್ಪ ಅವರುಗಳು ಆಯ್ಕೆಯಾಗಿದ್ದಾರೆ. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ಅವರು ಚುನಾವಣಾಧಿಕಾರಿಯಾಗಿದ್ದರು.
ಹರಿಹರದ ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ
ಹರಿಹರ ನಗರದ ಪ್ರತಿಷ್ಠಿತ ಶ್ರೀ ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ, ಕೆ.ರವಿಚಂದ್ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೊನ್ನೂರು ಗ್ರಾ.ಪಂ. ಅಧ್ಯಕ್ಷರಾಗಿ ಹನುಮಂತಪ್ಪ, ಉಪಾಧ್ಯಕ್ಷೆ ಪ್ರಭಾವತಿ
ಹೊನ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಎಂ. ಹನುಮಂತಪ್ಪ ಮತ್ತು ಉಪಾಧ್ಯಕ್ಷರಾಗಿ ಪ್ರಭಾವತಿ ಬದ್ಯಾನಾಯ್ಕ ಆಯ್ಕೆಯಾಗಿದ್ದಾರೆ.
ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ನೇತ್ರಾವತಿ, ಉಪಾಧ್ಯಕ್ಷರಾಗಿ ಚಂದ್ರಪ್ಪ
ಮಲೇಬೆನ್ನೂರು : ಭಾನುವಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ನೇತ್ರಾವತಿ ಕೊಟ್ರೇಶ್ ಮತ್ತು ಉಪಾಧ್ಯಕ್ಷರಾಗಿ ಕೋಣನತಲೆ ಚಂದ್ರಪ್ಪ ಆಯ್ಕೆಯಾಗಿದ್ದಾರೆ.
ಜಿಲ್ಲೂರು ಗ್ರಾ.ಪಂ. ಅಧ್ಯಕ್ಷರಾಗಿ ಹೆಚ್.ಕೆ. ಹಾಲಪ್ಪ, ಉಪಾಧ್ಯಕ್ಷೆ ಲಕ್ಷ್ಮಿದೇವಿ
ನ್ಯಾಮತಿ ತಾಲ್ಲೂಕಿನ ಜಿಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಗಿ ಹೆಚ್.ಕೆ. ಹಾಲಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿದೇವಿ ಅವಿರೋಧ ವಾಗಿ ಆಯ್ಕೆಯಾಗಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡ ಡಿ. ರಾಜಪ್ಪ ಹಾಗೂ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.
ಬೆಳವನೂರು ಗ್ರಾ. ಪಂ. ಅಧ್ಯಕ್ಷರಾಗಿ ಮಹಾಂತೇಶ್
ದಾವಣಗೆರೆ ತಾಲ್ಲೂ ಕಿನ ಬೆಳವನೂರು ಗ್ರಾಮ ಪಂಚಾಯಿ ತಿಗೆ ಅಧ್ಯಕ್ಷರಾಗಿ ಜೆ.ಹೆಚ್. ಮಹಾಂತೇಶ್ ಮತ್ತು ಉಪಾಧ್ಯಕ್ಷರಾಗಿ ಕೆ. ಶೃತಿ ಇವರು ಆಯ್ಕೆಯಾಗಿದ್ದಾರೆ.
ಶಾಸ್ತ್ರೀಯ ನೃತ್ಯ, ಸಂಗೀತಗಳು ಭಾರತೀಯ ಪರಂಪರೆಯ ಜೀವನಾಡಿಗಳು
ದಾವಣಗೆರೆ : ಶಾಸ್ತ್ರೀಯ ಸಂಗೀತ, ನೃತ್ಯ ಗಳು ಭಾರತೀಯ ಪರಂಪ ರೆಯ ಜೀವನಾಡಿಗಳಂತಿದ್ದು, ಸರ್ವಾಂತ ರ್ಯಾಮಿಯಾದ ಭಗವಂತನ ದರ್ಶನಕ್ಕೆ ಇವು ಸಾಧನಗಳು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಿಳಿ ಬೋರ್ಡ್ ವಾಹನಗಳ ಬಾಡಿಗೆ ತಡೆಗೆ ಮನವಿ
ಸಾರಿಗೆ ನಿಯಮಾನುಸಾರ ಹಳದಿ ನಂಬರ್ ಪ್ಲೇಟ್ನ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ಬಾಡಿಗೆ ಮಾಡಲು ಅವಕಾಶ ಮಾಡಿಕೊಡದಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಳದಿ ನಂಬರ್ ಪ್ಲೇಟ್ನ ಚಾಲಕರು ಮತ್ತು ಮಾಲೀಕರು ಒತ್ತಾಯಿಸಿದ್ದಾರೆ.
2ಎ ಮೀಸಲಾತಿ ದುರ್ಬಳಕೆ ತಡೆಗೆ ಅಹಿಂದ ಒಕ್ಕೂಟ ಒತ್ತಾಯ
ದಾವಣಗೆರೆ ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಲಿಂಗಾಯತ ಒಳಪಂಗಡಗಳ ಹೆಸರಿನಲ್ಲಿ ಕುರುಬರಿಗೆ ಸಿಗಬೇಕಾದ 2ಎ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಇದನ್ನು ತಡೆಯುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.