ಮಲೇಬೆನ್ನೂರು : ಇಲ್ಲಿನ ಹೊರ ವಲಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಶಾಸಕ ಹೆಚ್.ಡಿ. ರೇವಣ್ಣ ನಿನ್ನೆ ಭೇಟಿ ನೀಡಿದ್ದರು.
ಸೂರಗೊಂಡನಕೊಪ್ಪ : ನಾಡಿದ್ದು ಸಂತ ಸೇವಾಲಾಲರ ಜಯಂತಿ
ನ್ಯಾಮತಿ ತಾಲ್ಲೂಕು (ಭಾಯಾಗಡ) ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಇದೇ ದಿನಾಂಕ 13, 14 ಹಾಗೂ 15 ರಂದು ಸಂತ ಸೇವಾಲಾಲರ 282ನೇ ಜಯಂತ್ಯುತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ
ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಜಿಲ್ಲಾ ಸಮಿತಿಗೆ ಆಯ್ಕೆ
ದಾವಣಗೆರೆ : ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ಬೆಂಗಳೂರು) ದ ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಗಡ ಪತ್ರದ ವಿಶ್ಲೇಷಣೆ
ದಾವಣಗೆರೆ : ಮುಂಗಡ ಪತ್ರ 2021-2022 ರ ವಿಶ್ಲೇಷಣಾ ಕಾರ್ಯಕ್ರಮವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಯರಿಸ್ವಾಮಿ
ಕುವೆಂಪು ಕನ್ನಡ ಭವನದಲ್ಲಿ ಮಾರ್ಚ್ 1 ಮತ್ತು 2 ರಂದು ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ಪ್ರಬಂಧಕರೂ, ಹಿರಿಯ ಸಾಹಿತಿಯೂ ಆದ ಎನ್.ಟಿ. ಯರಿಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ
ಕುಕ್ಕುವಾಡದ ಆಂಜನೇಯ ಸಹಕಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ದಾವಣಗೆರೆ ತಾಲ್ಲೂಕಿನ ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ನಿಯಮಿತದ 2020-21 ರಿಂದ 2024-25 ರ ಅವಧಿಗೆ ಮಂಡಳಿ ಸದಸ್ಯರ ಸ್ಥಾನಕ್ಕೆ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕದಳಿ ವೇದಿಕೆಯಿಂದ ಕೊರೊನಾ ವಾರಿಯರ್ಗೆ ಸನ್ಮಾನ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ನಗರದ ಕದಳಿ ಮಹಿಳಾ ವೇದಿಕೆ ವತಿಯಿಂದ ತನ್ನ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ನಡೆಸಿದ ಕಾರ್ಯಕ್ರಮದ ಸಂದರ್ಭದಲ್ಲಿ ಕೊರೊನಾ ವಾರಿಯರ್ ಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ಒತ್ತಾಯ
ದಾವಣಗೆರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಬೆಂಬಲಿಸಿ ಜಿಲ್ಲಾಧ್ಯಕ್ಷ ಬಸವರಾಜು ವಿ. ಶಿವಗಂಗಾ ನೇತೃತ್ವದಲ್ಲಿ ರಕ್ತಪತ್ರ ಚಳುವಳಿ ನಡೆಸಿ, ಪ್ರಧಾನ ಮಂತ್ರಿಗಳಿಗೆ ರಕ್ತ ಪತ್ರವನ್ನು ಕಳುಹಿಸಲಾಯಿತು.
ಜಿಗಳಿ ಕ್ಯಾಂಪ್ನಲ್ಲಿ ಕ್ರಿಕೆಟ್ ಟೂರ್ನಿಗೆ ಚಾಲನೆ
ಮಲೇಬೆನ್ನೂರು : ವಿನಾಯಕ ನಗರ ಕ್ಯಾಂಪ್ ಸಮೀಪ ಇರುವ ಬಯಲು ಪ್ರದೇಶದಲ್ಲಿ ಜಿಗಳಿಯ ಮಿತ್ರ ಕ್ರಿಕೆಟರ್ ವತಿಯಿಂದ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಎರಡು ದಿನಗಳು ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿದರು.
ಮಲೇಬೆನ್ನೂರು : ಪುರಸಭೆ, ನಾಡ ಕಛೇರಿ ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ
ಮಲೇಬೆನ್ನೂರು : ಇಲ್ಲಿನ ಪುರಸಭೆಯ ಮತ್ತು ನಾಡ ಕಛೇರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಂಗಳವಾರ ಮತ್ತು ಬುಧವಾರ 2ನೇ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಯಿತು.