ಚಿತ್ರದುರ್ಗ ಎಂದ ಕೂಡಲೇ ನಮ್ಮ ಕಣ್ಮುಂದೆ ಬಂದು ನಿಲ್ಲುವುದು ಏಳುಸುತ್ತಿನ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಯರಿಸ್ವಾಮಿ
ಜಗಳೂರು : ಬರುವ ಮಾರ್ಚ್ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹತ್ತನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಎನ್.ಟಿ. ಯರಿಸ್ವಾಮಿ ಅವರಿಗೆ ಜಿಲ್ಲಾ ಕಸಾಪ ದಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.
ಗುಡೇಕೋಟೆ ಮಠದ ಬಣವೆಗೆ ಬೆಂಕಿ
ಕೂಡ್ಲಿಗಿ : ತಾಲ್ಲೂಕಿನ ಗುಡೇಕೋಟೆಯ ವಿರಕ್ತ ಮಠದಲ್ಲಿರುವ ಶೇಂಗಾ ಉಬ್ಬಲು ಬಣವೆಗೆ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸಹಸ್ರಾರು ರೂ.ನಷ್ಟು ನಷ್ಟವಾಗಿದೆ.
ಹಡಗಲಿ ತಾಲ್ಲೂಕು ಗ್ರಾ.ಪಂ. ಸದಸ್ಯರಿಗೆ ರೆಡ್ಡಿ ಸಮಾಜದಿಂದ ಸನ್ಮಾನ
ಹೂವಿನ ಹಡಗಲಿ ತಾಲ್ಲೂಕು ರೆಡ್ಡಿ ಸಮಾಜದಿಂದ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರುಗಳು ಹಾಗೂ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ ಚುನಾಯಿತರಾಗಿರುವ ಎನ್.ಡಿ. ರೇಖಾರವರನ್ನು ಅಭಿನಂದಿಸಲಾಯಿತು.
ಮ್ಯಾಸಬ್ಯಾಡರ ಸಂಸ್ಕೃತಿ ಉಳಿಸಿ, ಬೆಳೆಸಲು ಶಾಸಕ ರಘುಮೂರ್ತಿ ಕರೆ
ಚಳ್ಳಕೆರೆ : ಪ್ರಸ್ತುತ ಆಧುನಿಕ ಯುಗದಲ್ಲಿ ಮ್ಯಾಸಬ್ಯಾಡರ ಹಲವು ಬುಡಕಟ್ಟು ಸಂಸ್ಕೃತಿ ಮರೆಯಾಗುತ್ತಿದ್ದು, ಮ್ಯಾಸಬ್ಯಾಡರಲ್ಲಿ ಹೆಚ್ಚಿನ ಶಿಕ್ಷಣದ ಜೊತೆಗೆ ಕಣ್ಮರೆಯಾಗುತ್ತಿರುವ ಮ್ಯಾಸಬ್ಯಾಡರ ಸಂಸ್ಕೃತಿ ಉಳಿಸಿ, ಬೆಳೆಸಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಹರಪನಹಳ್ಳಿ ತಾಲ್ಲೂಕು ವೀರಶೈವ ಸಭಾ ಅಧ್ಯಕ್ಷರಾಗಿ ರಾಜಶೇಖರ್
ಹರಪನಹಳ್ಳಿ : ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಶನಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜನಹಳ್ಳಿ ವಾಲ್ಮೀಕಿ ಜಾತ್ರೆ : ಪಾದಯಾತ್ರೆಗೆ ಚಾಲನೆ
ಹರಪನಹಳ್ಳಿ : ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಜರುಗಲಿರುವ ಮೂರನೇ ವರ್ಷದ ವಾಲ್ಮೀಕಿ ಜಾತ್ರೆಗೆ ಪಾದಯಾತ್ರೆ ಹೊರಟ ವಾಲ್ಮೀಕಿ ನಾಯಕ ಸಮಾಜದ ಬಂಧುಗಳಿಗೆ ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿಗಳಿಂದ ಶೀಘ್ರ ಚಾಲನೆ
ರಾಣೇಬೆನ್ನೂರು ನಗರದಲ್ಲಿ ಹಮ್ಮಿಕೊಂಡಿ ರುವ ದಿನದ 24 ಗಂಟೆ ಕುಡಿಯುವ ನೀರು ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರ ದಲ್ಲಿಯೇ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ್ ಹೇಳಿದ್ದಾರೆ.
ನಗರದಲ್ಲಿ ದುರ್ಗಾ ಪೂಜೆ, ದುರ್ಗಾ ದೀಪ ನಮಸ್ಕಾರ
ವಿಶ್ವ ಮಧ್ವ ಮಹಾಪರಿಷತ್ (ಬೆಂಗಳೂರು) ವತಿಿಯಂದ ನಗರದ ಪಿಜೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ದುರ್ಗಾ ಪೂಜೆ ಹಾಗೂ ದುರ್ಗಾ ದೀಪ ನಮಸ್ಕಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಮೊನ್ನೆ ಸಂಜೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಸೂರಗೊಂಡನಕೊಪ್ಪದಲ್ಲಿ 13 ರಿಂದ ಸಂತ ಸೇವಾಲಾಲ್ ಜಯಂತಿ
ಸಂತ ಸೇವಾಲಾಲ್ ಅವರ 282 ನೇ ಜಯಂತಿ ಉತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಇದೇ ದಿನಾಂಕ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ನ್ಯಾಮತಿ ತಾಲ್ಲೂಕು ಸೂರಗೊಂಡ ನಕೊಪ್ಪದಲ್ಲಿ ಆಚರಿಸಲಾಗುತ್ತಿದೆ.