Day: February 7, 2021

Home 2021 February 07 (Sunday)
Post

ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಪ್ರಸ್ತಾವನೆ

ದಾವಣಗೆರೆ ಸಮೀಪದ ತೋಳಹುಣಸೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ ಪ್ರಸ್ತಾವನೆ ಕಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಿರಿಯ ಚಿತ್ರಕಲಾವಿದ  ಎ. ಮಹಾಲಿಂಗಪ್ಪ ಅವರಿಗೆ ಸನ್ಮಾನ
Post

ಹಿರಿಯ ಚಿತ್ರಕಲಾವಿದ ಎ. ಮಹಾಲಿಂಗಪ್ಪ ಅವರಿಗೆ ಸನ್ಮಾನ

ನಗರದ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ ಅವರನ್ನು ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇಪ್ಪ ಸನ್ಮಾನಿಸಿ, ಗೌರವಿಸಿದರು.

ರಾಮ ಮಂದಿರಕ್ಕೆ ಇಂದ್ರಪ್ಪ ಗೌಡ್ರು ಲಕ್ಷ ರೂ.
Post

ರಾಮ ಮಂದಿರಕ್ಕೆ ಇಂದ್ರಪ್ಪ ಗೌಡ್ರು ಲಕ್ಷ ರೂ.

ಶ್ರೀನಿತ್ಯ ಚೇತನಾ ಚಿಟ್ಸ್ ಪ್ರೈ. ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್‌ ಮಾಲೀಕರೂ, ಬಿಜೆಪಿ ಮುಖಂಡರೂ ಆದ ಇಂದ್ರಪ್ಪ ಗೌಡ್ರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷದ ಒಂದು ಸಾವಿರದ ಒಂದು ರೂಪಾಯಿಗಳನ್ನು ನೀಡಿದರು.

ಕಾಂಕ್ರೀಟ್ ರಸ್ತೆಗೆ ಶಾಸಕರ ಚಾಲನೆ
Post

ಕಾಂಕ್ರೀಟ್ ರಸ್ತೆಗೆ ಶಾಸಕರ ಚಾಲನೆ

ರಾಣೇಬೆನ್ನೂರು ತಾಲ್ಲೂಕಿನ ಬಸಲೀಕಟ್ಟಿ, ಪದ್ಮಾವತಿಪುರ ತಾಂಡಾ, ನಂದಿಹಳ್ಳಿ ಹಾಗೂ ಬೇಲೂರು ಗ್ರಾಮಗಳ ಪರಿಶಿಷ್ಟ ಜಾತಿಯವರ ಓಣಿಗಳಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿ ದರು.

ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು
Post

ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು

ಮಲೇಬೆನ್ನೂರು : ಸಂವಿಧಾನಿಕ ಹಕ್ಕುಗಳನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಈ ಹಿಂದೆ ಎಲ್‌.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಅಧ್ಯಯನ ವರದಿ ಕೊಟ್ಟಾಗ ಆ ವರದಿಯನ್ನು ಸುಟ್ಟು ಹಾಕಿರುವವರು ಈಗ ಮೀಸಲಾತಿ ಕೇಳುತ್ತಿದ್ದಾರೆ

ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯದ ತರಬೇತಿ ಅಗತ್ಯ
Post

ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯದ ತರಬೇತಿ ಅಗತ್ಯ

ಗ್ರಾಮ ಪಂಚಾಯ್ತಿಯಿಂದ ಲೋಕಸಭೆ ವರೆಗಿನ ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯ ಕಲೆಯ ತರಬೇತಿಯ ಅಗತ್ಯವಿದೆ ಎಂದು ಸಾಣೇಹಳ್ಳಿ ಶ್ರೀಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹದ ಕೂಗು
Post

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹದ ಕೂಗು

ಜಿಲ್ಲೆಯಲ್ಲಿ ರೈತ ಸಂಘಟನೆಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಿ, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹದ ಕೂಗು ಹಾಕಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ  ಹಣಕಾಸು ಅಧಿಕಾರಿಯಾಗಿ ಪ್ರಿಯಾಂಕ
Post

ದಾವಣಗೆರೆ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಯಾಗಿ ಪ್ರಿಯಾಂಕ

ದಾವಣಗೆರೆ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಯಾಗಿ ಡಿ. ಪ್ರಿಯಾಂಕ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. 

ಮಲೇಬೆನ್ನೂರು : ಪಡಿತರ ವಿತರಕರಿಂದ ಕಮೀಷನ್‌ ಹೆಚ್ಚಳಕ್ಕೆ ಮನವಿ
Post

ಮಲೇಬೆನ್ನೂರು : ಪಡಿತರ ವಿತರಕರಿಂದ ಕಮೀಷನ್‌ ಹೆಚ್ಚಳಕ್ಕೆ ಮನವಿ

ಮಲೇಬೆನ್ನೂರು : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರನ್ನು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಭೇಟಿ ಮಾಡಿ ಸರ್ಕಾರಿ ಪಡಿತರ ವಿತರಕರ ಕುಂದುಕೊರತೆಗಳ ಕುರಿತು ಮನವಿ ಮೂಲಕ ಗಮನ ಸೆಳೆಯಲಾಯಿತು.

Post

ಹೆದ್ದಾರಿಯಲ್ಲಿ ಹೋಮ ಮಾಡಿ ಪ್ರತಿಭಟಿಸಿದ ರಾಣೇಬೆನ್ನೂರಿನ ರೈತರು

ರಾಣೇಬೆನ್ನೂರು : ದೆಹಲಿಯಲ್ಲಿ ಎರಡು ತಿಂಗಳುಗಳಿಂದ ಚಳುವಳಿ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕಿನ ಮಾಕನೂರ ತಿರುವಿನ ಬಳಿ ರೈತರು ಹೆದ್ದಾರಿ ಬಂದ್ ಮಾಡಿ ಹೋಮ ಮಾಡುವ ಮೂಲಕ  ಪ್ರತಿಭಟನೆ ನಡೆಸಿದರು.