ಹೊಸ ಮಾದರಿಯ ವೆಸ್ಪಾ ಬಿಡುಗಡೆ

ಹೊಸ ಮಾದರಿಯ ವೆಸ್ಪಾ ಬಿಡುಗಡೆ

ದಾವಣಗೆರೆ, ಫೆ.5- ಅಪ್ರಿಲಿಯಾ ಮತ್ತು ವೆಸ್ಪಾ ಕಂಪನಿಯ ಹೊಸ ಮಾದರಿಯ SXR160 ವೆಸ್ಪಾ ಮತ್ತು ಅಪ್ರಿಲಿಯಾ ದ್ವಿಚಕ್ರ ವಾಹನಗಳ ಬಿಡುಗಡೆ ಕಾರ್ಯಕ್ರಮವು ನಗರದ ನಯನ ಮೋಟಾರ್‌ನಲ್ಲಿ ಇಂದು  ನಡೆಯಿತು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ ಹಾಗೂ ನಯನ ಮೋಟಾರ್‌ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ನಡೆಸಲಾಯಿತು. ಆರ್‌.ಟಿ.ಓ ಶ್ರೀಧರ್‌ ಕೆ. ಮಲನಾಡ್‌ ಅವರು ಕಾರ್ಯಕ್ರಮವನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಸುರೇಶ್‌ ಎಂ, ವಾಸುದೇವ ಮತ್ತು ಜೆ.ಹೆಚ್. ಪಟೇಲ್‌ ಅವರ ಸಹೋದರಿ ಅನುಸೂಯಮ್ಮ, ನಯನ ಮೋಟಾರ್‌ ಮಾಲೀಕರಾದ ಚಿನ್ಮಯ ಕುಂಚೂರು, ಕೊಟ್ರೇಶ್‌ ಶಾನಭೋಗ್‌, ಪಿಯಾಗಿಯಾ ಕಂಪನಿಯ
ಎ.ಎಸ್‌.ಎಂ., ಬೆಸ್ಕಾಂ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್ ಇಂಜಿನಿಯರ್  ನಾಯಕ್‌ ಉಪಸ್ಥಿತರಿದ್ದರು. 

Leave a Reply

Your email address will not be published.