ದಾರಿ ಯಾವುದಯ್ಯಾ ಸ್ಮಾರ್ಟ್ ಸೈಕಲ್‌ಗೆ…?

ದಾರಿ ಯಾವುದಯ್ಯಾ ಸ್ಮಾರ್ಟ್ ಸೈಕಲ್‌ಗೆ…?

ಇನ್ನೊಂದು ಉದಾಹರಣೆ ದೂರದ ಚೀನಾದ್ದು. ಚೀನಾದ ಮಹಾ ನಗರಗಳಲ್ಲಿ ಸೈಕಲ್ ಬಾಡಿಗೆಗೆ ನೀಡಲು ಹತ್ತಾರು ಕಂಪನಿಗಳು ಹುಟ್ಟಿ ಕೊಂಡವು. ಬೇಕಾದಾಗ ಸೈಕಲ್ ಪಡೆಯಿರಿ, ಬೇಕೆಂದಲ್ಲಿ ನಿಲ್ಲಿಸಿ ಎಂಬ ಸೂತ್ರ ನೀಡಿದವು. ಜನರೋ ಎಲ್ಲೆಂದರಲ್ಲಿ ಸೈಕಲ್ ಬಿಸಾಕಲು ಆರಂಭಿಸಿ ದರು. ಸೈಕಲ್ ಯಾವ ರೀತಿ ಬಿಸಾಕಿದರು ಎಂದರೆ ಅಡ್ಡಡ್ಡ ಮಲಗಿಸಿದ ಸೈಕಲ್‌ಗಳೇ 8 ಅಡಿ ಎತ್ತರದ ರಾಶಿಗಳಾದವು. ಕೊನೆಗೆ ಸರ್ಕಾರ ಸೈಕಲ್ ಪಾರ್ಕಿಂಗ್ ಹೊಣೆ ಕಂಪನಿಗಳದ್ದು ಎಂದು ಹೇಳಿತು. ಅಂದದ್ದೇ ತಡ, ಸೈಕಲ್ ಪಾರ್ಕಿಂಗ್ ನಿರ್ವಹಿಸಲಾಗದೇ ಕಂಪನಿಗಳು ಮುಚ್ಚಿಕೊಂಡವು. ಸೈಕಲ್‌ಗಳು ರಾಶಿಗಳಾಗಿ ಸೇರಿದವು. ಈಗ ಇಂಟರ್‌ನೆಟ್‌ನಲ್ಲಿ ಚೀನಾ ಸೈಕಲ್ ಗ್ರೇವ್‌ಯಾರ್ಡ್ ಎಂದು ಹುಡುಕಿದರೆ ಬಣ್ಣ ಬಣ್ಣದ ಸೈಕಲ್‌ಗಳನ್ನು ರಾಶಿಯಾಗಿಟ್ಟಿರುವ ಅಚ್ಚರಿಯ ಹಾಗೂ ವಿಷಾದದ ಚಿತ್ರಗಳನ್ನು ನೋಡಬಹುದು.

ಭಾರತದಲ್ಲಿ ಯುವಕರೇ ಹೆಚ್ಚಾಗಿದ್ದಾರೆ, ಅವರು ಸೈಕಲ್ ತುಳಿಯಬಲ್ಲರು. ಆದರೆ, ಸೈಕಲ್‌ ಕೊಟ್ಟರಷ್ಟೇ ಸಾಲದು, ಸಮರ್ಪಕವಾದ ಸೈಕಲ್ ಕಾರಿಡಾರ್ ಬೇಕು. ಕಾರಿಡಾರ್‌ ನಂತರ ಅವುಗಳ ನಿರ್ವಹಣೆ ಬೇಕು. ಸೈಕಲ್ ಮತ್ತೆ ತುಳಿಯಲು ಜನರು ಮನಸ್ಸು ಮಾಡುವಂತಹ ಉತ್ತೇಜಕಗಳು ಹಾಗೂ ಮನೋಭಾವ ಬೇಕು. ಇದ್ಯಾವುದೂ ಇಲ್ಲದೇ ಸೈಕಲ್ ಏರಿ ಎಂದರೆ ಅದು ಸ್ಮಾರ್ಟ್ ಯೋಚನೆಯಾಗದು.

ಕೊರೊನಾ ಕಾಲದಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದರು. ಪರಿಸರ ನೈರ್ಮಲ್ಯವಾಗಿರುವುದನ್ನು ಅನುಭವಿಸಿದರು. ಹೀಗಾಗಿ ಪರಿಸರ ಸ್ನೇಹಿ ಸೈಕಲ್ ಹಾಗೂ ಸೈಕಲ್‌ ಪಾತ್‌ಗೆ ಹೊಸ ಅವಕಾಶ ಸಿಕ್ಕಿತು ಎಂಬ ಭಾವನೆಗಳು ಎಲ್ಲೆಡೆ ಕೇಳಿ ಬಂದವು. ಆದರೆ, ಕೊರೊನಾ ಕರಗಿದಂತೆ ಈ ಮನೋಭಾವವೂ ಕರಗುತ್ತಾ ಬಂದಿದೆ. ತೈಲ ಬೇಡಿಕೆ ಹೆಚ್ಚಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದಾಖಲೆ ಹಂತಕ್ಕೆ ತಲುಪಿವೆ. ಇಷ್ಟಾದರೂ, ಸೈಕಲ್ ಎಂಬುದು ಬಡವರ ಹಾಗೂ 18 ವರ್ಷವಾಗಿಲ್ಲ ಎಂಬ ಕಾರಣಕ್ಕೆ ಡಿ.ಎಲ್. ಸಿಗದು ಎಂದು ಅನಿವಾರ್ಯವಾಗಿ ಸೈಕಲ್ ಹಿಡಿಯುವ ಹದಿ ಹರೆಯದ ಪೀಳಿಗೆಗೆ ಹೆಚ್ಚಾಗಿ ಸೀಮಿತವಾಗಿದೆ. 

ನಗರದಲ್ಲಿ ಆರಂಭವಾಗಿರುವ ಸ್ಮಾರ್ಟ್ ಸಿಟಿಯ ಯೋಜನೆಯೂ ಈ ಎಲ್ಲ ತೊಡಕುಗಳನ್ನು ಎದುರಿಸಬೇಕಿದೆ. ಮೊನ್ನೆ ವಿದ್ಯಾನಗರದ ಪಾರ್ಕ್‌ನಲ್ಲಿರುವ §ಸ್ಮಾರ್ಟ್’ ಶೌಚಾಲಯ ಬಳಸಲು ಹೋದಾಗ ಅದು ನನ್ನ ಎಂಟು ರೂ.ಗಳ ನಾಣ್ಯವನ್ನು ನುಂಗಿತೇ ಹೊರತು, ಸುತಾರಾಂ ಬಾಗಿಲು ತೆರೆಯಲಿಲ್ಲ. ಮೊಬೈಲ್‌ಗೆ ಆಪ್‌, ಆಪ್‌ಗೆ ಕರೆನ್ಸಿ, ತಿಂಗಳಿಗೆ ಮೆಂಬರ್‌ಶಿಪ್‌ ಬಾಡಿಗೆ ಕೊಟ್ಟು ನಿಗದಿತ ಜಾಗಕ್ಕೆ ಕಾಲ್ನಡಿಗೆ ತೆರಳಿ ಸೈಕಲ್‌ ತುಳಿಯುವ ಸಾಹಸಿಗಳು ಸೈಕಲ್ ಯೋಜನೆ ಯಶಸ್ವಿಗೊಳಿಸಲಿದ್ದಾರೆಯೇ ಅಥವಾ ಸ್ಮಾರ್ಟ್‌ ಶೌಚಾಲಯದಂತೆ ಸೈಕಲ್‌ಗಳೂ §ಸ್ಮಾರ್ಟ್‌’ ಆಗುತ್ತವೆಯೇ ಎಂಬುದು ಒಂದೆರಡು ತಿಂಗಳಲ್ಲೇ ನಿರ್ಧಾರವಾಗಲಿದೆ.


ಎಸ್.ಎ. ಶ್ರೀನಿವಾಸ್‌
srinivas.sa@gmail.com

 

Leave a Reply

Your email address will not be published.